ಮೈಸೂರು: ಸಾಮಾನ್ಯ ವೈದ್ಯಕೀಯ ತರ್ತು ಪರಿಸ್ಥಿತಿಯಲ್ಲಿ ಜೀವದ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪನಿರ್ದೇಶಕಿ ಬಿ.ಎಸ್.ಪ್ರಭಾ ಅರಸ್ ಕರೆ ನೀಡಿದರು.
ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್‌ನ ಜೀವರಕ್ಷಕ ಟ್ರಸ್ಟ್, ರೋಟರಿ ಮೈಸೂರು ವತಿಯಿಂದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಆಶ್ರಮ ಶಾಲೆಗಳಲ್ಲಿನ ಮುಖ್ಯಶಿಕ್ಷಕರು, ಶಿಕ್ಷಕರು, ನಿಲಯಪಾಲಕರು, ಅಧಿಕಾರಿಗಳಿಗೆ ಜೀವ ಸುರಕ್ಷತೆಗೆ ಅಗತ್ಯ ಮೂಲಭೂತ ಜ್ಞಾನ ಕುರಿತು ೩ ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಈ ಕಾರ್ಯಾಗಾರದಲ್ಲಿ ಕಲಿತದ್ದನ್ನು ಯಾರು ಮರೆಯದೆ ನಿಮ್ಮ ಶಾಲೆಯ ಮಕ್ಕಳಿಗೆ ಅಕ್ಕಪಕ್ಕದವರಿಗೆ ತರಬೇತಿ ನೀಡಿರಿ. ಎಚ್.ಡಿ.ಕೋಟೆ, ಹುಣಸೂರು ಪಿರಿಯಾಪಟ್ಟಣ, ನಂಜನಗೂಡು ತಾಲೂಕಿನ ೨೧ ಆಶ್ರಮ ಶಾಲೆಗಳ ಹಾಗೂ ವಿದ್ಯಾರ್ಥಿನಿಲಯಗಳ ೧೨೦ ಜನ ಶಿಕ್ಷಕರುಗಳಿಗೆ ತರಬೇತಿ ನೀಡಲಾಗುತ್ತಿದ್ದು, ಈ ತರಬೇತಿ ಪಡೆದವರೆಲ್ಲರು ಹಾಡಿ ಜನರಲ್ಲಿಯು ಅರಿವು ಮತ್ತು ಜಾಗೃತಿ ಮೂಡಿಸುವ ಮುಖಾಂತರ ಜನರ ಜೀವ ರಕ್ಷಣೆ ಮಾಡಲು ಸಹಕರಿಸಬೇಕೆಂದು ತಿಳಿಸಿದರು.
ಸಂಶೋಧನಾಧಿಕಾರಿ ಸಿ.ಶಿವಕುಮಾರ್, ರೋಟರಿ ಮೈಸೂರಿನ ಅರುಣ್ ಬೆಳವಾಡಿ, ಡಾ.ರೇಖಾ, ಡಾ.ಸುಮಂತ್, ಡಾ.ದಾಕ್ಷಾಯಿಣಿ, ಸತ್ಯರಾಜ್, ದಿವ್ಯಾ, ವಿದ್ಯಾಶ್ರೀ, ತಾಲೂಕು ಕಲ್ಯಾಣಾಧಿಕಾರಿ ಎಚ್.ಸಿ.ಬಸವರಾಜು, ಎಂ. ನಾರಾಯಣಸ್ವಾಮಿ, ನಂದಿನಿ, ಪ್ರತೀಕ್ಷ, ಅನಿಲ್, ಕೃಷ್ಣ ಮತ್ತಿತರರಿದ್ದರು.