ಹೆಚ್.ಡಿ.ಕೋಟೆ : ವ್ಯಕ್ತಿಯೊಬ್ಬರ ಜಮೀನಿನಲ್ಲಿ ಜೀತಕ್ಕಿದ್ದ ನೇಪಾಳ ಮೂಲದ ಮಹಿಳೆ ಇಬ್ಬರು ಮಕ್ಕಳನ್ನು ತಾಲೂಕು ಆಡಳಿತ ರಕ್ಷಿಸಿ ಮಾನವೀಯತೆ ಮೆರೆದಿದೆ. ಪತ್ರಕರ್ತ ಎಚ್.ಬಿ.ಬಸವರಾಜು ಅವರು ನೀಡಿದ ಖಚಿತ ಮಾಹಿತಿ ಆಧರಿಸಿ ತಹಶೀಲ್ದಾರ್ ಶ್ರೀನಿವಾಸ್, ಸಿಡಿಪಿಒ ಆಶಾ, ಸಮಾಜ ಕಲ್ಯಾಣ ಇಲಾಖೆ ರಾಮಸ್ವಾಮಿ, ಗಿರಿಜನ ಅಭಿವೃದ್ದಿ ಇಲಾಖೆ ನಾರಾಯಣಸ್ವಾಮಿ ಜೀವಿಕ ಸಂಘಟನೆ ಉಮೇಶ್, ಎಎಸ್‌ಐ ಸುಭಾನ್ ಅವರು ಕಾರ್ಯಾಚರಣೆ ನಡೆಸಿ ತಾಯಿ ಮಕ್ಕಳನ್ನ ಜೀತಪದ್ದತಿಯಿಂದ ಮುಕ್ತಿಗೊಳಿಸಿದ್ದಾರೆ.
ನೇಪಾಳ ಮೂಲದ ಮಹಿಳೆ ನಿರ್ಮಲ ಹಾಗೂ ಇಬ್ಬರು ಮಕ್ಕಳು ಇದೀಗ ಸುರಕ್ಷಿತರಾಗಿದ್ದಾರೆ. ಮಧ್ಯವರ್ತಿಯೊಬ್ಬರ ಮೂಲಕ ಪತಿ ಗೋಪಾಲ್ ಮತ್ತು ಇಬ್ಬರು ಮಕ್ಕಳೊಂದಿಗೆ ಜಮೀನಿನ ಮಾಲೀಕರ ತೋಟದ ಮನೆಯಲ್ಲಿ ಒಂದೂವರೆ ವರ್ಷದಿಂದ ನಿರ್ಮಲ ಜೀತದಾಳಾಗಿ ದುಡಿಯುತ್ತಿದ್ದರು. ಈರೇಗೌಡ ಎಂಬುವವರ ಜಮೀನಿನ ತೋಟದ ಮನೆಯಲ್ಲಿ ಇದ್ದರು.
ಪತ್ನಿಗೆ ೨೦೦ರೂ ಪತಿಗೆ ೩೦೦ ದಿನಕ್ಕೆ ಕೂಲಿ ಆಧಾರದ ಮೇಲೆ ಈರೇಗೌಡ ಜಮೀನಿನ ಕೆಲಸಕ್ಕೆ ಸೇರಿಸಿಕೊಂಡಿದ್ದ. ಸಮಯದ ಮಿತಿ ಇಲ್ಲದೆ ಈರೇಗೌಡ ದುಡಿಸಿಕೊಳ್ಳುತ್ತಿದ್ದರೆಂಬ ಆರೋಪ ಕೇಳಿಬಂದಿದೆ. ಇದನ್ನ ವಿರೋಧಿಸಿದ್ದಕ್ಕೆ ನಾಲ್ಕು ತಿಂಗಳಿಂದ ದಂಪತಿಯನ್ನ ಬೇರ್ಪಡಿಸಿದ್ದ ಈರೇಗೌಡ ಪತಿಯನ್ನು ಕೊಡಗಿನಲ್ಲಿರಿಸಿದ್ದ.ಇಬ್ಬರ ಭೇಟಿಗೂ ಅವಕಾಶ ಕಲ್ಪಿಸುತ್ತಿರಲಿಲ್ಲವೆಂದು ಆರೋಪಿಸಲಾಗಿದೆ. ಹಲವು ಭಾರಿ ಹಲ್ಲೆ ನಡೆಸಿ ಊಟಕ್ಕೂ ನೀಡದೆ ಉಪವಾಸ ಇರಿಸಿ ಪುಟಾಣಿ ಮಕ್ಕಳಿಂದಲೂ ದುಡಿಸಿಕೊಳ್ಳುತ್ತಿದ್ದನೆಂದು ಆರೋಪ ಕೇಳಿಬಂದಿದೆ. ಕಾರ್ಯಾಚರಣೆ ನಡೆಸಿ ಅಮಾಯಕ ಮಹಿಳೆ ಹಾಗೂ ಮಕ್ಕಳನ್ನ ರಕ್ಷಿಸಿದ ತಹಸೀಲ್ದಾರ್ ಸಿಡಿಪಿಒ ವಶಕ್ಕೆ ನೀಡಿದ್ದಾರೆ.
ಎಚ್.ಡಿ.ಕೋಟೆ ತಾಲೋಕಿನ ಭೀಮನಹಳ್ಳಿ ಸಮೀಪದ ಕೈಲಾಸ ಪುರ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದೆ. ಈರೇಗೌಡರ ಜಮೀನಿನಲ್ಲಿ ಘಟನೆ.ದಂಪತಿಯನ್ನ ಸೇರಿಸಲು ಅಧಿಕಾರಿಗಳು ಯತ್ನಿಸುತ್ತಿದ್ದಾರೆ. ಪತ್ನಿ ಬಿಡುಗಡೆ ವಿಷಯ ದೂರವಾಣಿ ಮೂಲಕ ತಿಳಿದ ಪತಿ ಗೋಪಾಲ್ ಕೊಡಗು ಜಿಲ್ಲೆಯಿಂದ ಆಗಮಿಸುತ್ತಿದ್ದಾರೆ.