ಮಂಡ್ಯ: ಇಬ್ಬರು ನಿರ್ದೇಶಕರ ಅನರ್ಹ ಖಂಡಿಸಿ ಮನ್ಮುಲ್ ನ ಜೆಡಿಎಸ್ ನಿರ್ದೇಶಕರಿಂದ ಮಂಡ್ಯದ ಸಹಕಾರ ಸಂಘಗಳ ಸಹಾಯಕ ನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಅಧ್ಯಕ್ಷ ಸ್ಥಾನದ ಚುನಾವಣೆಗೂ ಮುನ್ನ ವಿಶ್ವನಾಥ್ ಹಾಗೂ ರಾಮಚಂದ್ರು ಅವರನ್ನು ಸಹಾಯಕ ನಿಬಂಧಕರು ಅನರ್ಹ ಮಾಡಿ ಆದೇಶ ಹೊರಡಿಸಿದ್ದರು.
ಜೆಡಿಎಸ್ ಗೆ ಅಧ್ಯಕ್ಷ ಸ್ಥಾನ ತಪ್ಪಿಸಲು ಕುತಂತ್ರದಿಂದ ಅನರ್ಹ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಚಿವ ಚಲುವರಾಯಸ್ವಾಮಿ ಸೂಚನೆಯಂತೆ ಅನರ್ಹ ಮಾಡಲಾಗಿದೆ. ಅನರ್ಹ ಮಾಡೋದಕ್ಕೆ ಏನು ಕಾರಣ ಅಂತ ಕೇಳೋದಕ್ಕೆ ಬಂದ್ರೆ ಅಧಿಕಾರಿಯೇ ಇಲ್ಲ. ಜೆಡಿಎಸ್ ನ ಇಬ್ಬರಿಗೆ ಮತದಾನದ ಹಕ್ಕು ತಪ್ಪಿಸಿ ಕುತಂತ್ರದಿಂದ ಕಾಂಗ್ರೆಸ್ ಗೆದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಹಾಗೂ ಸಹಕಾರಿ ನಿಬಂಧಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜಿಟಿಜಿಟಿ ಮಳೆಯಲ್ಲೂ ಜೆಡಿಎಸ್ ನಿರ್ದೇಶಕರು ಪ್ರತಿಭಟನೆ ನಡೆಸುತ್ತಿದ್ದು ಕೆ.ಆರ್.ಪೇಟೆ ಶಾಸಕ ಹೆಚ್.ಟಿ.ಮಂಜು ಭಾಗಿಯಾಗಿದ್ದಾರೆ.