ಬಾಗಲಕೋಟೆ: ಕನಿಷ್ಠ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನವನಗರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮುಂದೆ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ನಿಲಯಗಳ ಹೊರ ಗುತ್ತಿಗೆ ನೌಕರರ ಸಂಘದಿಂದ ತಡರಾತ್ರಿ ವರೆಗೂ ಪ್ರತಿಭನೆ ನಡೆಸಲಾಯಿತು.
ಸಿ ಮತ್ತು ಡಿದರ್ಜೆ ನೌಕರರಿಗೆ ನಿವೃತ್ತವರೆಗೂ ಸಿಬ್ಬಂದಿಗಳಿಗೆ ಸೇವಾ ಭದ್ರತೆ ನೀಡುವುದು ಹಾಗೂ ಕನಿಷ್ಠ ವೇತನವನ್ನು ಇಲಾಖೆ ನೇರವಾಗಿ ಖಾತೆಗೆ ಜಮಾ ಮಾಡವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.
ಬೇಡಿಕೆ ಈಡೇರದಿದ್ದರೆ ಹೋರಾಟ ಮುಂದುವರೆಸುವುದಾಗಿ ಸಂಘದ ರಾಜ್ಯ ಜಂಟಿಕಾರ್ಯದರ್ಶಿ ಹುಲಗೆಪ್ಪ ಚಲವಾದಿ ಎಚ್ಚರಿಕೆ ನೀಡಿದ್ದಾರೆ.