ಹೊಸೂರು : ಸಾಲಿಗ್ರಾಮ ಪಟ್ಟಣದಲ್ಲಿ ನಡೆದ ರೈತ ಸಂಘಟನೆಗಳು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರಮುಖ ರಸ್ತೆ ಗಳಲ್ಲಿ ಕಾವೇರಿ ನದಿ ನೀರನ್ನು ತಮಿಳುನಾಡಿನ ಬಿಡುತ್ತಿರುವ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು.
ರೈತ ಮಹಿಳಾ ಸಂಘ, ಆಟೋ ಚಾಲಕರ ಸಂಘ, ದಲಿತ ಸಂಘಟನೆಗಳು, ಅಂಗಡಿ ವರ್ತಕರ ಸಂಘ, ವಿಶ್ವ ಕನ್ನಡ ಸಮಿತಿ ಸಂಘ, ವಾಹನ ಚಾಲಕರ ಸಂಘ, ಟೈಲರ್ ಸಂಘ, ವಾಲ್ಮೀಕಿ ಸಂಘ ಸೇರಿದಂತೆ ಇನ್ನಿತರೆ ಹಲವಾರು ಪ್ರಗತಿಪರ ಸಂಘಟನೆಗಳು, ರಾಜ್ಯ ರೈತ ಸಂಘಟನೆ ಸೇರಿದಂತೆ ಕಾವೇರಿ ನೀರನ್ನು ತಮಿಳು ನಾಡಿಗೆ ಬಿಡದಂತೆ ಚಳುವಳಿಯನ್ನು ಹಮ್ಮಿಕೊಂಡಿದ್ದರು.
ಬಸ್ ನಿಲ್ದಾಣ, ಗಾಂಧಿ ವೃತ, ಚುಂಚನಕಟ್ಟೆರಸ್ತೆ, ಮಹಾವೀರ ರಸ್ತೆ ಗಳಲ್ಲಿ ಮೆರವಣಿಗೆ ನಡೆಸಿದರು, ಬಸ್ ನಿಲ್ದಾಣ ಸೇರಿದಂತೆ ಅಂಗಡಿ, ಮುಗ್ಗಟ್ಟುಗಳು ಬಿಕೋ ಎನ್ನುತ್ತಿದ್ದವು, ಎಲ್ಲರ ಸಹಕಾರವು ಸಂಪೂರ್ಣವಾಗಿ ಇದ್ದುದರಿಂದ ಬಿಕೋ ಎನ್ನಿಸುತ್ತಿತ್ತು.
ಕಾವೇರಿ ಜಲಾಯನ ಪ್ರದೇಶದಲ್ಲಿ ಮುಂಗಾರು ಮಳೆ ತುಂಬಾ ಕಡಿಮೆ ಆಗಿದೆ, ಇಲ್ಲಿಯವರೆಗೆ ಜಲಾಶಯ ತುಂಬಿಲ್ಲ, ಆದ್ದರಿಂದ ಕಾವೇರಿ ಜಲಾಯನ ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಮತ್ತು ಕುಡಿಯುವ ನೀರಿಗೆ ತೊಂದರೆ ಉಂಟಾಗುತ್ತದೆ. ಈ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಮದ್ಯಸ್ತಿಕೆಯನ್ನು ಕೈಗೊಂಡು ಕರ್ನಾಟಕದ ರೈತರಿಗೆ ಮತ್ತು ಜನ ಸಾಮಾನ್ಯರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಸಾಲಿಗ್ರಾಮ ತಾಲೂಕು ಬಂದ್ ಚಳುವಳಿ ನಡೆಸಿದ್ದೇವೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಎಸ್ ಬಿ ಶೇಖರ್ ತಿಳಿಸಿದರು
ಈ ಸಂದರ್ಭದಲ್ಲಿ ತಾಲೂಕು ಆಡಳಿತ ಕಚೇರಿ ಶಿರಸ್ಡೆದಾರ್ ಶಿವಕುಮಾರ್ ರವರಿಗೆ ಮನವಿ ಪತ್ರ ಸಲ್ಲಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಳ್ಳಿ ಸೋಮು, ತಾಲೂಕು ರೈತ ಸಂಘದ ಅಧ್ಯಕ್ಷ ಎಸ್ ಬಿ ಶೇಖರ್, ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ತಿಮ್ಮಪ್ಪ, ತಾಲೂಕು ರೈತ ಮಹಿಳೆ ಅಧ್ಯಕ್ಷೆ ಲೀಲಾವತಿ, ಸಾಲಿಗ್ರಾಮ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಎಸ್.ಆರ್.ಪ್ರಕಾಶ್ ಕುಸುಮ , ಸಾರಾ ಪ್ರಕಾಶ್, ಅಂಕನಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ರುಕ್ಮಿಣಿ, ಜಿಲ್ಲಾ ಸಂಚಾಲಕ ಕಳ್ಳಿಮುದ್ದಾನಹಳ್ಳಿ ಚಂದ್ರು, ಶುಭಾಷಿನಿ, ಎಸ್ ಕೆ ಮಧುಚಂದ್ರ, ಪುರಿ ಗೋವಿಂದರಾಜು, ಸೀಗೋಳು ಸುಧಾಕರ್,ಮೂಡಲಬೀಡು ಮಹೇಶ್, ಭೇರ್ಯ ಕೃಷ್ಣ, ರಾಂಪುರ ಶೇಟ್ಟೇಗೌಡ, ಸಾಲಿಗ್ರಾಮ ಗ್ರಾಮ ಪಂಚಾಯಿತಿ ಸದಸ್ಯ ಹರೀಶ್, ಮಾಜಿ ಅಧ್ಯಕ್ಷೆ ದೇವಿಕಾ, ಸೀಗೋಳು ಸುಧಾಕರ್, ಪ್ರೀತಮ್, ಜೋಗಿ ಶಿವು, ಕುಮಾರಸ್ವಾಮಿ,ಗೌತಮ್, ಮನುಗನಹಳ್ಳಿ ತ್ಯಾಗರಾಜ್, ನಟೇಶ್, ದೇವರಾಜ್, ವಿ ಎಸ್ ಎಸ್ ಎನ್ ನಿರ್ದೇಶಕ ನಾಗೇಂದ್ರ, ಸತೀಶ್,ಮೇಲೂರು ಕರೀಗೌಡ ಸೇರಿದಂತೆ ಇನ್ನಿತರೆ ಸಂಘಟನೆಗಳು ಭಾಗವಹಿಸಿದ್ದರು.