ಮದ್ದೂರು: ಐಪಿಎಸ್ ಅಧಿಕಾರಿ ರವಿಕಾಂತೇಗೌಡರ ತೇಜೋವಧೆಗೆ ಮುಂದಾಗಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಮೆರವಣಿಗೆ ಹೊರಟು ಪೇಟೆ ಬೀದಿ ಮಾರ್ಗವಾಗಿ ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಎಡಿಜಿಪಿಯಾಗಿರುವ ರವಿಕಾಂತೇಗೌಡ ವಿರುದ್ಧ ಹುಲಿಯೂರುದುರ್ಗ ಮೂಲದ ಕೃಷ್ಣ ಹಾಗೂ ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿ ಸುಳ್ಳು ಸುದ್ದಿ ಪ್ರಕಟಿಸುವ ಮೂಲಕ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ತೇಜೋವಧೆ ಮಾಡುವ ಮೂಲಕ ಮಾನಹಾನಿ ಮಾಡಿದ್ದಾರೆ ಎಂದು ಆರಪಿಸಿದರು.

ಸುಳ್ಳು ಸುದ್ದಿ ಪ್ರಕಟಿಸಿರುವ ರಾಕೇಶ್ ಶೆಟ್ಟಿ ಹಾಗೂ ಕೃಷ್ಣ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಬಳಿಕ ತಾಲೂಕು ಕಚೇರಿ ಎದುರು ಮೈಸೂರು ಬೆಂಗಳೂರು ಹೆದ್ದಾರಿ ತಡೆದ ಪರಿಣಾಮ ಸ್ವಲ್ಪ ಹೊತ್ತು ಸಂಚಾರ ಅವ್ಯವಸ್ಥೆ ಉಂಟಾಯಿತು ಬಳಿಕ ರಾಕೇಶ್ ಶೆಟ್ಟಿ ಹಾಗೂ ಕೃಷ್ಣ ಅವರ ಪ್ರತಿ ಕೃತಿಗಳನ್ನ ದಹನ ಮಾಡಲಾಯಿತು.
ಮುಖಂಡರಾದ ದೇಶ ಹಳ್ಳಿ ಮೋಹನ್ ಕುಮಾರ್, ಪ್ರೊಫೆಸರ್ ಕೃಷ್ಣ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಪಿ ಶಿವಪ್ಪ, ಕಾರ್ಯದರ್ಶಿ ಸುರೇಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬೋರೆಯ್ಯ, ಮನ್ ಮುಲ್ ನಿರ್ದೇಶಕಿ ರೂಪಾ, ರಜಿನಿರಾಜ್ ನೇತೃತ್ವ ವಹಿಸಿದ್ದರು.