Wednesday, April 16, 2025
Google search engine

Homeಸ್ಥಳೀಯಗಿರಿವಿ ಇಟ್ಟಿರುವ ಚಿನ್ನಾಭರಣವನ್ನು ಬಿಡಿಸಿ ಕೊಡುವಂತೆ ಆಗ್ರಹಿಸಿ ಪ್ರತಿಭಟನೆ

ಗಿರಿವಿ ಇಟ್ಟಿರುವ ಚಿನ್ನಾಭರಣವನ್ನು ಬಿಡಿಸಿ ಕೊಡುವಂತೆ ಆಗ್ರಹಿಸಿ ಪ್ರತಿಭಟನೆ


ಚಾಮರಾಜನಗರ : ತಾಲೂಕಿನ ಮಲೆಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗಿರಿವಿ ಇಟ್ಟಿರುವ ಚಿನ್ನಾಭರಣವನ್ನು ಬಿಡಿಸಿಕೊಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ, ಕರ್ನಾಟಕ,ರೈತ ಸಂಘಟನೆಗಳ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಹೊರಟ ಪ್ರತಿಭಟನಾಕಾರರು ಮೆರವಣಿಗೆ ಮೂಲಕ ಶ್ರೀ.ಬಿ.ರಾಚಯ್ಯ ಜೋಡಿ ರಸ್ತೆಯ ಮೂಲಕ ಜಿಲ್ಲಾ ಆಡಳಿತ ಭವನದ ಮುಂಭಾಗ ತೆರಳಿ ಪ್ರತಿಭಟನೆ ನಡೆಸಿದರು.ಮಲೆಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಲ್.ಶಿವಪ್ಪ, ಕಾರ್ಯದರ್ಶಿ ನಾಗೇಂದ್ರ, ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಸಾಲ ನೀಡಿದ್ದು, ಮತ್ತೆ ಹಣ ಕಟ್ಟಿದರೆ ನಮ್ಮ ಚಿನ್ನಾಭರಣವನ್ನು ವಾಪಸ್ ನೀಡಲು ಹಿಂದೇಟು ಹಾಕುತ್ತಿದ್ದಾರೆ. ನಾವು ಸಂಘದಲ್ಲಿ ಇಟ್ಟಿರುವ ಚಿನ್ನಾಭರಣಗಳನ್ನು ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಆಡಳಿತ ಮಂಡಳಿ ಸದಸ್ಯರು ಇತರೆ ಖಾಸಗಿ ಸೌಲಭ್ಯಗಳನ್ನು ಇಟ್ಟು ಅಧಿಕ ಹಣ ಪಡೆದು ನಮಗೆ ಮೋಸ ಮಾಡಿದ್ದಾರೆ.ಈ ಕೂಡಲೇ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಿ ನಮ್ಮ ಚಿನ್ನ ಆಭರಣಗಳನ್ನು ಬಿಡಿಸಿಕೊಡಬೇಕು ಎಂದು ಎಲ್ಲರೂ ಒತ್ತಾಯಿಸಿದರು. ತಾಲೂಕಿನ ಮಲೆಯೂರು, ಮುಕ್ಕಡಹಳ್ಳಿ, ಕುಲಗಾಣ, ಚಿಕ್ಕಬೇಗೂರು, ಅರಳಿಕಟ್ಟೆ, ಮೇಘಲಹುಂಡಿ,ಕೀಳಣಪುರ ಸೇರಿದಂತೆ ಇನ್ನು ಹೆಚ್ಚು ಗ್ರಾಮಗಳ ರೈತರಿಂದ ಚಿನ್ನಾಭರಣದ ಮೇಲೆ ಸಾಲ ನೀಡಿದ್ದಾರೆ.ಆದರೆ ಕಳೆದ ೯ ವರ್ಷಗಳಿಂದ ರೈತರ ಚಿನ್ನಾಭರಣಗಳನ್ನು ಹಣ ಕೊಟ್ಟರು ಸಹ ಹಿಂದಿರಿಗಿಸಿರುವುದಿಲ್ಲ ಎಂದು ಹೇಳಿದರು. ನಂತರ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಡಿಎಸ್ ರಮೇಶ್ ಅವರಿಗೆ ಮನವಿ ಸಲ್ಲಿಸಿ ಪ್ರತಿಭಟನೆಯನ್ನು ನಿಲ್ಲಿಸಿದರು ಪ್ರತಿಭಟನೆಯಲ್ಲಿ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಗುರುಸ್ವಾಮಿ,ನಾಗರಾಜು, ಬಸವರಾಜಪ್ಪ,ಷಡಕ್ಷರಿ ಪ್ರವೀಣ್ ಸೇರಿದಂತೆ ಇತರರು ಭಾಗವಹಿಸಿದರು.

RELATED ARTICLES
- Advertisment -
Google search engine

Most Popular