ಚಾಮರಾಜನಗರ : ಕಬ್ಬು ಬೆಳೆಗಾರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಚಾಮರಾಜನಗರ ಜಿಲ್ಲೆಯ ಕಬ್ಬು ಬೆಳಗಾರರು ಜಿಲ್ಲಾಧಿಕಾರಿ ಕಚೇರಿಯ ಮುಖ್ಯ ದ್ವಾರದಿಂದ ಘೋಷಣೆಗಳನ್ನು ಕೂಗುತ್ತಾ ಜಿಲ್ಲಾಧಿಕಾರಿ ಕಚೇರಿ ಮುಂದೆ ವಿವಿಧ ಬೇಡಿಕೆಗಳಿಗೆ ಹಾಗೂ ಕಳೆದ ವರ್ಷದ 150 ರೂಪಾಯಿ ಬಾಕಿ ವಸೂರಾತಿಗಾಗಿ ಹಾಗೂ ರೈತರು ಮತ್ತು ಕಾರ್ಖಾನೆ ಮಾಲೀಕರ ಸಭೆ ಕರೆಯಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ನೇತೃತ್ವ ವಹಿಸಿದ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ ಬಣ್ಣಾರಿ ಸಕ್ಕರೆ ಕಾರ್ಖಾನೆ ಪ್ರಾರಂಭವಾಗುವುದರಿಂದ ರೈತರ ಹಕ್ಕು ಮತ್ತು ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆಯಬೇಕು. ಕಳೆದ ವರ್ಷ ರಾಜ್ಯ ಸರ್ಕಾರ ರಾಜ್ಯ ಕಬ್ಬು ಬೆಳೆಗಾರರ ಸಂಘದ ಹೋರಾಟದ ಫಲವಾಗಿ ಪ್ರತಿ ಟನ್ ಕಬ್ಬಿಗೆ ಹೆಚ್ಚುರಿಯಾಗಿ 150 ರೂಪಾಯಿ ನಿಗದಿ ಮಾಡಿದ್ದು ಅದನ್ನು ತಕ್ಷಣ ರೈತರಿಗೆ ಪಾವತಿ ಮಾಡಿ ಕಾರ್ಖಾನೆ ಪ್ರಾರಂಭಿಸಲು ಒತ್ತಾಯ ,ಕೇಂದ್ರ ಸರ್ಕಾರ 2023-24 ಸಾಲಿಗೆ ಎಫ್ಆರ್ಪಿ ದರವನ್ನು ಪ್ರತಿ ಕೆಜಿಗೆ 10 ಪೈಸೆ ಕ್ವಿಂಟಾಲ್ ಗೆ 10 ರೂಪಾಯಿ ಅಂತೆ ಟನ್ ಒಂದಕ್ಕೆ ಕೇವಲ ರೂ.100 ಜಾಸ್ತಿ ಮಾಡುವುದನ್ನು ಮರು ಪರಿಶೀಲನೆ ಮಾಡಬೇಕು ಎಂದು ಹೇಳಿದರು.
ಅಪಾರ ಜಿಲ್ಲಾಧಿಕಾರಿ ಗೀತಾ ಉಡೆದ್ ರವರಿಗೆ ಹಕ್ಕು ಒತ್ತಾಯ ಪತ್ರವನ್ನು ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಪಿ ಸೋಮಶೇಖರ್ ಪ್ರಧಾನ ಕಾರ್ಯದರ್ಶಿ, ಕಿರಗಸೂರು ಶಂಕರ್ ಪಟೇಲ್ ಶಿವಮೂರ್ತಿ ಮೂಕಳ್ಳಿ ಮಹದೇವಸ್ವಾಮಿ ಚಾಮರಾಜನಗರ ತಾಲೂಕ ಅಧ್ಯಕ್ಷ ಹಾಲಿನ ನಾಗರಾಜು ಮಲಿಯೂರ್ ಹರ್ಷ ಕುರುಬೂರ್ ಸಿದ್ದೇಶ್ ಹಾಡ್ಯ ರವಿ ಬೆನಕನಹಳ್ಳಿ ಪರಶಿವಮೂರ್ತಿ ಪ್ರಸಾದ್ ನಾಯಕ ಅಪ್ಪಣ್ಣ ಹುಡಿಗಾಲ ಮಂಜುನಾಥ್ ಮಹದೇವಸ್ವಾಮಿ ಮಲಿಯೂರು ಬಸವರಾಜಪ್ಪ ಮಹೇಂದ್ರ ಸತೀಶ ಪ್ರವೀಣ್ ಜನ್ನೂರ್ ಹೊಸೂರು ಅನಿಲ್ ರಾಜೇಶ್ ಅರಳಿಕಟ್ಟೆ ಪ್ರಭು ಮುಂತಾದವರು ಹಾಜರಿದ್ದರು.