Saturday, April 19, 2025
Google search engine

Homeರಾಜ್ಯಸುದ್ದಿಜಾಲಸೇವಾ ನಿರತ ಪದವಿಧರ ಶಿಕ್ಷಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕೆಂದು ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ

ಸೇವಾ ನಿರತ ಪದವಿಧರ ಶಿಕ್ಷಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕೆಂದು ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ

ಶಿರಸ್ತೇದಾರ್ ಯೋಗಾಚಾರ್‌ರವರಿಗೆ ಮನವಿ ಪತ್ರ ಸಲ್ಲಿಕೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಸರ್ಕಾರ ಕಳೆದ ೭ ವರ್ಷಗಳಿಂದ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅಳವಡಿಸಿರುವ ಅವೈಜ್ಞಾನಿಕ ಅಂಶಗಳಿoದ ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೇವಾ ನಿರತ ಪದವಿಧರ ಶಿಕ್ಷಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕೆಂದು ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಮೈಸೂರು-ಹಾಸನ ರಸ್ತೆಯ ಬಳಿ ಇರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಬಳಿಯಿಂದ ಮೆರವಣಿಗೆಯಲ್ಲಿ ತೆರಳಿದ ಶಿಕ್ಷಕರು ಸರ್ಕಾರ ಶಿಕ್ಷಕರ ಪರವಾಗಿ ಕೆಲಸ ಮಾಡಬೇಕು ಜತೆಗೆ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂಬ ಘೋಷಣೆ ಕೂಗುತ್ತಾ ತಾಲೂಕು ಕಛೇರಿಯವರೆಗೆ ಮೆರವಣಿಗೆಯಲ್ಲಿ ತೆರಳಿ ಆನಂತರ ಶಿರಸ್ತೇದ್ದಾರ್ ಯೋಗಾಚಾರ್‌ರವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕಲ್ಯಾಣಪುರ ರಾಜಶೇಖರ್ ಮಾತನಾಡಿ ಕಳೆದ ತಿಂಗಳು ೨೯ರಂದು ನಡೆದ ರಾಜ್ಯ ಸಂಘದ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಪಾಲ್ಗೊಂಡ ೩೫ ಶೈಕ್ಷಣಿಕ ಜಿಲ್ಲೆಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಭಾಗವಹಿಸಿ ಶಿಕ್ಷಕರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದ್ದು ವಿಶೇಷವಾಗಿ ಸೇವಾ ನಿರತ ಪದವೀಧರ ಶಿಕ್ಷಕರುಗಳ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸುವಂತೆ ನಿರ್ಣಯ ಮಾಡಿ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಂಘದ ತೀರ್ಮಾನದಂತೆ ಶಿಕ್ಷಕರ ಹಿತದೃಷ್ಟಿಯಿಂದ ಬೇಡಿಕೆಗಳು ಈಡೇರುವವರೆಗೂ ಆ.೧೨ರವರೆಗೆ ವಿವಿಧ ಹಂತದಲ್ಲಿ ಸಾಂಘಿಕ ಶಕ್ತಿಯ ವಿರಾಟ ಪ್ರದರ್ಶನ ಮಾಡಲಿದ್ದೇವೆ ಈ ಸಂದರ್ಭದಲ್ಲಿ ಶಿಕ್ಷಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸರ್ಕಾರದ ಗಮನ ಸೆಳೆಯಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಶಿಕ್ಷಕರ ಸಂಘದ ಸಹಕಾರ್ಯದರ್ಶಿ ಎಸ್.ಕೆ.ಸುರೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎನ್.ಸ್ವಾಮಿ, ಉಪಾಧ್ಯಕ್ಷರಾದ ಕೃಷ್ಣನಾಯಕ, ಮೀನಾಕ್ಷಿಬಾಯಿ, ಖಜಾಂಜಿ ಕಂಚಗಾರಕೊಪ್ಪಲು ನಾಗರಾಜು ಪದಾಧಿಕಾರಿಗಳಾದ ಎಸ್.ಆರ್.ಕಮಲಮ್ಮ, ಬೋಜೇಗೌಡ, ರಮಾಮಣಿ, ಶಿಕ್ಷಕರುಗಳಾದ ಸೈಯದ್‌ರಿಜ್ವಾನ್, ನಾಗರಾಜ್, ಬಿ.ಸಿ.ಮಹದೇವ್, ತುಳಸಿರಾಮನಾಯಕ, ಭಾರತಿ, ಬಿ.ವಿ.ಪ್ರಸನ್ನಕುಮಾರ್, ಚಿಕ್ಕಕೊಪ್ಪಲು ಪುರುಷೋತ್ತಮ್, ಹಳಿಯೂರು ದೇವೇಂದ್ರ, ಎಸ್.ಅರ್.ನಾಗೇಶ್, ಬಿ.ಎನ್.ಭಾಸ್ಕರ್, ಮುಕುಂದ, ಶಿಗವಾಳ್ ಕುಮಾರ್, ಕಿಶೋಶ್ ಗೌಡ, ಮಂಜುಳಾ, ಶಿಮಮ್ಮ, ಕಲಾವಿದಮಹದೇವ್, ಹೆಬ್ಬಾಳು ಈಶ್ವರ್, ಲಕ್ಕಿಕುಪ್ಪೆ ಶಂಕರೇಗೌಡ, ಮೋಹನ್, ರಾಮಕೃಷ್ಣ, ಸುರೇಶ್, ಶಿಗವಾಳು ಕುಮಾರ್ , ಚನ್ನಂಗೆರೆ ಪ್ರಭು, ಸವಿತಾ,ಸುಕನ್ಯ,ವಿನೋಬ,ಎಸ್.ಎನ್.ರವಿ, ಸುಮಾ, ಡಿ.ವಿ.ಪ್ರಶನ್ನ ಕುಮಾರ್, ಸಿದ್ದಯ್ಯ, ಡಿ.ಆರ್.ಕುಮಾರ್, ಭಾರತಿ, ಕಮಲಮ್ಮ, ಶ್ರೀರಾಮಪುರ ರಾಜೇಶ್, ಚುಂಚನಕಟ್ಟೆ ವಿಠಲ್ ಮಂಜುನಾಥ್, ಜಲೇಂದ್ರ, ಮಂಜುರಾಜ್, ಸಿದ್ದೇಗೌಡ, ಹೆಬ್ಬಾಳು ಮಂಜೇಗೌಡ, ಮಂಜುನಾಥ್, ಕರ್ತಾಳು ಕುಮಾರ್, ವಸಂತ್ ಕುಮಾರ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು

RELATED ARTICLES
- Advertisment -
Google search engine

Most Popular