Friday, April 11, 2025
Google search engine

Homeರಾಜ್ಯವಕ್ಫ್ ವಿಚಾರಕ್ಕೆ ಪ್ರತಿಭಟನೆ ಮಾಡ್ತಿರೋದು ಬಿಜೆಪಿಯವರ ಮೂರ್ಖತನ: ಡಿಕೆ ಶಿವಕುಮಾರ್

ವಕ್ಫ್ ವಿಚಾರಕ್ಕೆ ಪ್ರತಿಭಟನೆ ಮಾಡ್ತಿರೋದು ಬಿಜೆಪಿಯವರ ಮೂರ್ಖತನ: ಡಿಕೆ ಶಿವಕುಮಾರ್

ಬೆಂಗಳೂರು: ವಕ್ಫ್ ವಿಚಾರಕ್ಕೆ ಪ್ರತಿಭಟನೆ ಮಾಡ್ತಿರೋದು ಬಿಜೆಪಿಯವರ ಮೂರ್ಖತನ. ಅವರ ಕಾಲದಲ್ಲೇ ಪಹಣಿಗಳು ಬರ್ತಿವೆ. ಅದನ್ನ ನಮ್ಮವರು ನೋಡಿಲ್ಲ. ಈಗ ಅದರ ಬಗ್ಗೆ ಮಾತನಾಡ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಆ ಹೇಳಿಕೆಯನ್ನ ಒಪ್ಪುವುದಿಲ್ಲ. ಅದನ್ನ ನಾನು ಖಂಡಿಸ್ತೇನೆ. ಜಮೀರ್ ಅವರು ಏನುಬೇಕಾದ್ರೂ ಕರೆದುಕೊಳ್ಳಲಿ. ಕರಿಯ ಅಂತಾದ್ರೂ ಅನ್ನಲಿ, ಕೊಚ್ಚೆ ಅಂತಾದ್ರೂ ಕರೆಯಲಿ. ನಾನು ಪಕ್ಷದ ಅಧ್ಯಕ್ಷನಾಗಿ ಹೇಳ್ತೇನೆ. ನಾನು ಆನ್ ರೆಕಾರ್ಡ್ ಹೇಳ್ತೇನೆ ಜಮೀರ್ ಹೇಳಿದ್ದು ಸರಿಯಲ್ಲ. ಕಪ್ಪು ಬಿಳುಪು ಅಂತ ಕರೆಯೋದು ಸರಿಯಲ್ಲ. ಇನ್ನು ಜಮೀರ್ ವಿರುದ್ಧ ಕ್ರಮ ತೆಗೆದುಕೊಳ್ಳುವುದನ್ನು ಆಮೇಲೆ ನೋಡೋಣ ಎಂದಿದ್ದಾರೆ.

ಜಮೀರ್ ವಿರುದ್ಧ ಶಿಸ್ತು ಕ್ರಮ ಜರುಗಿಸುವ ವಿಚಾರವಾಗಿ ಮಾತನಾಡಿದ ಅವರು, ಜಮೀರ್ ಅವರದ್ದು ಪರ್ಸನಲ್ ವಿಚಾರ. ಅವರು ಮಾತನಾಡಬಾರದಿತ್ತು. ಕಪ್ಪು ಬಿಳುಪು ಅದೆಲ್ಲಾ ಬೇಡ. ಪಕ್ಷದ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ. ಪ್ರೀತಿಯಿಂದ ಮಾತಾಡಿದ್ರೋ ಸಲುಗೆಯಿಂದ ಮಾತನಾಡಿದ್ದಾರೋ ತಪ್ಪು ತಪ್ಪೇ. ಜಮೀರ್ ಅವರಿಗೆ ಆಂತರಿಕವಾಗಿ ಹೇಳಿದ್ದೇವೆ. ಅವರು ಕ್ಷಮೆ ಕೂಡ ಕೇಳಿದ್ದಾರೆ. ನಾವು ಆ ಹಂತ ಹೋಗಬಾರದು ಅಷ್ಟೇ. ಅವರಿಬ್ಬರು ಏನು ಅಂತ ಗೊತ್ತಿಲ್ಲ. ಅದು ಜನ ತೀರ್ಮಾನ ಮಾಡಲಿ. ನಾನು ಹೇಳಿದ್ದು, ಜಮೀರ್ ಹೇಳಿದ್ದು ರಾಂಗ್. ನಾವು ಅವರನ್ನ ತಿದ್ದುತ್ತೇವೆ ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular