ಚಾಮರಾಜನಗರ: ಭಾರತದ ಮಾಜಿ ಉಪ ಪ್ರಧಾನಿಗಳಾದ, ಹಿರಿಯ ಮುತ್ಸದಿಗಳಾದ ಎಲ್ ಕೆ ಅಡ್ವಾಣಿ ರವರಿಗೆ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಿರುವುದು ಹೆಮ್ಮೆಯ ವಿಷಯವೆಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿ ಅಭಿನಂದಿಸಿದ್ದಾರೆ.
ಭಾರತದ ಗೌರವಾನ್ವಿತ ಹಿರಿಯರು, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂಘಟನೆಯ ಶ್ರೇಷ್ಠ ವ್ಯಕ್ತಿತ್ವದ ಎಲ್ ಕೆ ಅಡ್ವಾಣಿ ರವರು ಭಾರತಕ್ಕೆ ನೀಡಿರುವ ಸೇವೆ ಅನನ್ಯವಾದದ್ದು. ಉಪ ಪ್ರಧಾನಿಗಳಾಗಿ, ಮಂತ್ರಿಗಳಾಗಿ, ಸಂಘಟನಾ ಹಾಗೂ ಹೋರಾಟಗಾರರಾಗಿ ಇಡೀ ದೇಶದ ಅಖಂಡತೆ ಮತ್ತು ಏಕತೆಗಾಗಿ ಇಡೀ ಜೀವನವನ್ನು ಭಾರತಕ್ಕಾಗಿ ಸಮರ್ಪಿಸಿದ ಅಖಂಡ ಭಾರತದ ಸಾಂಸ್ಕೃತಿಕ, ಆಡಳಿತಾತ್ಮಕ, ಸೇವೆ ಮತ್ತು ತ್ಯಾಗದ ವ್ಯಕ್ತಿಯಾಗಿರುವ ಅದ್ವಾನಿಯವರಿಗೆ ಭಾರತರತ್ನ ನೀಡಿರುವುದು ಕೋಟಿ ಕೋಟಿ ಭಾರತೀಯರಿಗೆ ಮತ್ತು ವಿಶೇಷವಾಗಿ ಯುವ ಸಮುದಾಯಕ್ಕೆ ಅಪಾರ ಸಂತಸವನ್ನು ನೀಡಿದೆ.
ಇತಿಹಾಸದ ಆದರ್ಶ ವ್ಯಕ್ತಿಗಳಾಗಿ ಅಧ್ಯಯನ ಮಾಡಲು ಮುಂದಿನ ಪೀಳಿಗೆಗೆ ಮಹತ್ವದ ರಾಷ್ಟ್ರೀಯ ಆದರ್ಶಗಳನ್ನು, ಮಾನವೀಯ ಮೌಲ್ಯಗಳನ್ನು ಹಾಗೂ ಭಾರತದ ಸಂಸ್ಕೃತಿ ,ಪರಂಪರೆ,ಅಧ್ಯಾತ್ಮಿಕ ಆಡಳಿತದ ಮಹತ್ವದ ಅಂಶಗಳನ್ನು ತಿಳಿಯಲು ಸಹಾಯವಾಗುವುದು.
ಎಲ್ ಕೆ ಅಡ್ವಾಣಿ ಅವರಿಗೆ ಭಾರತ ರತ್ನ ನೀಡಿ ಗೌರವಿಸಿರುವ ಭಾರತ ಸರ್ಕಾರಕ್ಕೆ ಕೋಟಿ ಕೋಟಿ ಭಾರತೀಯರ ಪರವಾಗಿ ಧನ್ಯವಾದಗಳು ಹಾಗೂ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.