Saturday, September 13, 2025
Google search engine

Homeರಾಜ್ಯಸುದ್ದಿಜಾಲಸಾರ್ವಜನಿಕ ಗ್ರಂಥಾಲಯಕ್ಕೆ ಸೂಕ್ತ ಸ್ಥಳ ನೀಡಿ: ಶಾಸಕ ಎ.ಆರ್. ಕೃಷ್ಣಮೂರ್ತಿ ಮನವಿ

ಸಾರ್ವಜನಿಕ ಗ್ರಂಥಾಲಯಕ್ಕೆ ಸೂಕ್ತ ಸ್ಥಳ ನೀಡಿ: ಶಾಸಕ ಎ.ಆರ್. ಕೃಷ್ಣಮೂರ್ತಿ ಮನವಿ

ಯಳಂದೂರು: ಪಟ್ಟಣದಲ್ಲಿ ತಾಲೂಕು ಮಟ್ಟದ ಸಾರ್ವಜನಿಕ ಗ್ರಂಥಾಲಯ ನಿರ್ಮಾಣ ಮಾಡಲು ಪಂಚಾಯಿತಿ ವತಿಯಿಂದ ಸೂಕ್ತ ಖಾಲಿ ಸ್ಥಳವನ್ನು ನೀಡಿ ಜ್ಞಾನಾರ್ಜನೆಗೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಮನವಿ ಮಾಡಿದರು.

ಪಟ್ಟಣ ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಈ ಹಿಂದಿನ ಸಭೆಯಲ್ಲೂ ನಾನು ಪತ್ರವನ್ನು ಹಾಕಿದ್ದೆ. ಆದರೆ ನನಗೆ ಇನ್ನೂ ಉತ್ತರ ಸಿಕ್ಕಿಲ್ಲ. ಪಟ್ಟಣದ ಬಸ್ ನಿಲ್ದಾಣದಲ್ಲಿದ್ದ ಹಳೆಯ ಶೌಚಗೃಹ ಇದ್ದ ಸ್ಥಳದಲ್ಲಿ ಸಾರ್ವಜನಿಕ ಗ್ರಂಥಾಲಯ ನಿರ್ಮಾಣ ಮಾಡಲು ಅವಕಾಶವಿದ್ದು. ಇಲ್ಲಿ ಇದನ್ನು ನಿರ್ಮಿಸಿದ್ದಲ್ಲಿ ಎಲ್ಲರಿಗೂ ಅನುಕೂಲವಾಗಲಿದೆ. ಇಲ್ಲಿಗೆ ವಾಲ್ಮೀಕಿ ಗ್ರಂಥಾಲಯ ಎಂದು ನಾಮಕರಣ ಮಾಡಿ ಜ್ಞಾನಾರ್ಜನೆಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಪಟ್ಟಣದಲ್ಲಿ ಕುಡಿಯುವ ನೀರು ಯೋಜನೆಯಡಿಲ್ಲಿ ಅಮೃತ್ ೨.೦ ಯೋಜನೆಯಡಿಯಲ್ಲಿ ಸಂಬಂಧಪಟ್ಟ ಗುತ್ತಿಗೆದಾರ ಇನ್ನೂ ಕಾಮಗಾರಿ ಆರಂಭಿಸಿಲ್ಲ. ಇವರಿಗೆ ೧೫ ನೇ ಹಣಕಾಸು ಸಾಮಾನ್ಯ ಮೂಲ ಅನುದಾನದಡಿಯಲ್ಲಿ ಇದುವರೆವಿಗೂ ೬೬ ಲಕ್ಷ ರೂ. ಕೊಟ್ಟಿದೆ. ಆದರೆ ಇನ್ನೂ ಕಾಮಗಾರಿ ಆರಂಭಿಸಿಲ್ಲ. ಪೈಪ್‌ಗಾಗಿ ರಸ್ತೆ ಅಗೆಯಲಾಗಿದೆ. ನೀರಿನ ಪೈಪ್ ಒಡೆದರೂ ಈಗ ಕ್ರಮ ವಹಿಸುತ್ತಿಲ್ಲ ಬಳೇಪೇಟೆಯಲ್ಲಿ ವಾಹನ ಓಡಾಟಕ್ಕೆ ತೊಂದರೆಯಾಗಿದೆ ಎಂದು ಕೆಲ ಸದಸ್ಯರು ದೂರು ನೀಡಿದರು. ಇದಕ್ಕೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ನೋಟಿಸ್ ನೀಡಿ, ಸಂಬಂಧಪಟ್ಟ ಇಇ ಕ್ರಮ ವಹಿಸಿ ಎಂದು ಮುಖ್ಯಾಧಿಕಾರಿಗೆ ಸೂಚನೆ ನೀಡಿದರು.

ಪಪಂ ವತಿಯಿಂದ ೨೦೨೧-೨೨ ನೇ ಸಾಲಿನಲ್ಲಿ ಶೌಚಗೃಹ ನಿರ್ಮಾಣಕ್ಕೆ ೩೩ ಮಂದಿ ಅರ್ಜಿ ಸಲ್ಲಿಸಿದ್ದರೂ ಕೂಡ ಇದುವರೆವಗಿಊ ಅವರಿಗೆ ಹಣವನ್ನು ನೀಡಿಲ್ಲ. ಪಂಚಾಯಿತಿ ವತಿಯಿಂದ ಜಿಯೋ ಟ್ಯಾಗ್ ಮಾಡಿಸಿ ಈ ಹಣವನ್ನು ನೀಡಲು ಕ್ರಮ ವಹಿಸಿ ಎಂದು ಸೂಚಿಸಲಾಯಿತು. ಇದಲ್ಲದೆ ೧೫ ನೇ ಹಣಕಾಸು ಯೋಜನೆಯಡಿಯಲ್ಲಿ ಕುಡಿಯು ನೀರಿಗೆ ೧೮.೯೦ ಲಕ್ಷ ರೂ. ಘನತ್ಯಾಜ್ಯ ವಸ್ತು ನಿರ್ವಹಣೆಯ ಶೇ. ೩೦ ರ ಅನುದಾನದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕದ ಸುತ್ತುಗೋಡೆಗೆ ೧೬.೧೦ ಲಕ್ಷ ರೂ. ವೈಯುಕ್ತಿಕ ಶೌಚಗೃಹ ನಿರ್ಮಾಣಕ್ಕೆ ೨.೮೦ ಲಕ್ಷ ರೂ. ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಚರಂಡಿ, ಕವರಿಂಗ್ ಸ್ಲಾಬ್ ನಿರ್ಮಾಣಕ್ಕೆ ೨೫.೨೦ ಲಕ್ಷ ರೂ. ಸೇರಿದಂತೆ ಒಟ್ಟು ೬೩. ಲಕ್ಷ ರೂ. ವೆಚ್ಚದ ಕಾಮಗಾರಿಗಳಿಗೆ ಅನುಮೋದನೆಯನ್ನು ನೀಡಲಾಯಿತು.

ಇದರೊಂದಿಗೆ ಬಸ್ ನಿಲ್ದಾಣ, ಬಳೇಪೇಟೆಯಲ್ಲಿ ಪೊಲೀಸ್‌ರನ್ನು ಹಾಕಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರವನ್ನು ಬರೆಯುವುದು, ಪಟ್ಟಣದ ಬಸ್ ನಿಲ್ದಾಣದಲ್ಲಿರುವ ಪೊಲೀಸ್ ಚೌಕಿ ನಿರುಪಯುಕ್ತವಾಗಿದ್ದು ಇದನ್ನು ವಾಪಸ್ಸು ಪಡೆದುಕೊಳ್ಳಲು ಪತ್ರ ಬರೆಯುವುದು, ಬಳೇಪೇಟೆಯಲ್ಲಿರುವ ಬಾರ್‌ಗಳಿಂದ ಆಗುತ್ತಿರುವ ಕಿರುಕುಳ, ಇಲ್ಲಿಗೆ ಪೊಲೀಸರನ್ನು ನೇಮಿಸುವುದು, ಬಳೇಪೇಟೆ ರಸ್ತೆಯನ್ನು ಅಗಲೀಕರಣಗೊಳಿಸುವುದು, ಪೌರ ಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಿಕೊಡುವುದು ಸೇರಿದಂತೆ ವಿವಿಧ ವಿಚಾರಗಳು ಪ್ರಸ್ತಾಪಗೊಂಡು ಇವೆಲ್ಲದರ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಪಂ ಅಧ್ಯಕ್ಷೆ ಲಕ್ಷ್ಮಿಮಲ್ಲು, ಉಪಾಧ್ಯಕ್ಷೆ ಶಾಂತಮ್ಮ ನಿಂಗರಾಜು ಸದಸ್ಯರಾದ ಮಹೇಶ್, ವೈ.ಜಿ. ರಂಗನಾಥ, ಮಹದೇವನಾಯಕ, ಸವಿತಾಬಸವರಾಜು, ಮಂಜು, ಮಹದೇವ, ಪ್ರಭಾವತಿ ರಾಜಶೇಖರ, ರವಿ, ಸುಶೀಲಾಪ್ರಕಾಶ್, ನಾಮ ನಿರ್ದೇಶಿತ ಸದಸ್ಯರಾದ ಲಿಂಗರಾಜಮೂರ್ತಿ, ಶ್ರೀಕಂಠಸ್ವಾಮಿ, ಮುನವ್ವರ್‌ಬೇಗ್ ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ಕುಮಾರ್ ಜೆಇ ನಾಗೇಂದ್ರ, ಪರಶಿವ, ಜಯಲಕ್ಷ್ಮಿ, ಲಕ್ಷ್ಮಿ, ಮಲ್ಲಿಕಾರ್ಜುನ ಸೇರಿದಂತೆ ಅನೇಕರು ಇದ್ದರು.

RELATED ARTICLES
- Advertisment -
Google search engine

Most Popular