Friday, April 11, 2025
Google search engine

Homeಸ್ಥಳೀಯದಸರಾ ಸಂದರ್ಭದಲ್ಲಿ ಮೈಸೂರಿನ ಹೋಟೆಲ್ಗಳಲ್ಲಿ ಅತಿಥಿಗಳಿಗೆ ಸಮರ್ಪಕವಾದ ಸೇವೆಯನ್ನು ಒದಗಿಸಿ: ಡಾ. ಪಿ ಶಿವರಾಜು

ದಸರಾ ಸಂದರ್ಭದಲ್ಲಿ ಮೈಸೂರಿನ ಹೋಟೆಲ್ಗಳಲ್ಲಿ ಅತಿಥಿಗಳಿಗೆ ಸಮರ್ಪಕವಾದ ಸೇವೆಯನ್ನು ಒದಗಿಸಿ: ಡಾ. ಪಿ ಶಿವರಾಜು

ಮೈಸೂರು: ದಸರಾ ಸಂದರ್ಭದಲ್ಲಿ ಮೈಸೂರಿನ ಹೋಟೆಲ್ಗಳಲ್ಲಿ ಅತಿಥಿಗಳಿಗೆ ಸಮರ್ಪಕವಾದ ಸೇವೆಯನ್ನು ಒದಗಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಹಾಗೂ ದಸರಾ ಸ್ವಾಗತ ಮತ್ತು ಸ್ಥಳಾವಕಾಶ ಸಮಿತಿಯ ಉಪವಿಶೇಷಾಧಿಕಾರಿಯಾದ ಡಾ. ಪಿ ಶಿವರಾಜು ಅವರು ಹೋಟೆಲ್ ಗಳ ಪ್ರತಿನಿಧಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಸರಾ ಸಂಬಂಧ ಹೋಟೆಲ್ ಪ್ರತಿನಿಧಿಗಳೊಂದಿಗೆ ನಡೆದ ದಸರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ದಸರಾ ನಮ್ಮ ನಾಡಿನ ಸಾಂಸ್ಕೃತಿಕ ಹೆಮ್ಮೆಯ ಪ್ರತೀಕ ಈ ನಾಡ ಹಬ್ಬಕ್ಕೆ ದೇಶ ವಿದೇಶಗಳಿಂದ ಪ್ರತಿಷ್ಠಿತ ಜನರೆಲ್ಲರೂ ಅತಿಥಿಗಳಾಗಿ ಆಗಮಿಸುತ್ತಾರೆ. ಅಲ್ಲದೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುತ್ತಾರೆ. ಆದ್ದರಿಂದ ಯಾವುದೇ ಲೋಪ ದೋಷವಾಗದಂತೆ ಉತ್ತಮ ರೀತಿಯಲ್ಲಿ ಅತಿಥಿ ಸತ್ಕಾರ, ಕೊಠಡಿಗಳ ನಿರ್ವಹಣೆ ನಡೆಸಿ ದಸರಾ ವನ್ನು ಯಶಸ್ವಿಗೊಳಿಸಲು ಹೋಟೆಲ್ ನವರು ಸಹಕರಿಸಬೇಕು ಎಂದು ಹೇಳಿ ಸೂಕ್ತ ನಿರ್ದೇಶನಗಳನ್ನು ನೀಡಿದರು.

ಸಭೆಯಲ್ಲಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣಗೌಡ ಸೇರಿದಂತೆ ವಿವಿಧ ಹೋಟೆಲ್ ವ್ಯವಸ್ಥಾಪಕರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular