ಕೊಳ್ಳೇಗಾಲ: ತಾಲೂಕಿನ ಚಿಲಕವಾಡಿ ಗ್ರಾಮದ ಬಳಿ ಇರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಶಾಸಕ ಎ.ಆರ್ ಕೃಷ್ಣ ಮೂರ್ತಿ ರವರು ಸೋಮವಾರ ಭೇಟಿ ನೀಡಿ ಕಾಲೇಜು ಅಭಿವೃದ್ಧಿ ಕುರಿತು ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ದರು.
ಮೊಟ್ಟಮೊದಲ ಬಾರಿಗೆ ಕಾಲೇಜಿಗೆ ಭೇಟಿ ನೀಡಿದ ನೂತನ ಶಾಸಕರಿಗೆ ಕಾಲೇಜು ಆಡಳಿತ ಮಂಡಳಿ ಪರವಾಗಿ ಗೌರವ ಸನ್ಮಾನ ನೀಡಿದರು. ಸನ್ಮಾನ್ಯ ಸ್ವೀಕರಿಸಿ ಶಾಸಕರು
ಮಾತನಾಡಿ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ನೀಡುವ ಮೂಲಕ ಸದೃಢ ಮಾನವೀಯತೆಯ ಸಮಾಜವನ್ನು ನಿರ್ಮಾಣ ಮಾಡುವುದು ತಮ್ಮ ಕರ್ತವ್ಯವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಮೂಡಿಸಿ , ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಗಳಿಸುವಂತೆ ಸಂಹವನ ಕೌಶಲ್ಯ , ಮೃದು ಕೌಶಲ್ಯ, ಜೀವನ ಕೌಶಲ್ಯ, ಮತ್ತು ವೃತ್ತಿ ಕೌಶಲ್ಯಗಳ ಬಗೆಗೆ ಅವರನ್ನು ತರಬೇತಿಗೊಳಿಸಬೇಕು ಎಂದರು. ಈ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದರವಾಗಿದ್ದು ಈ ಕಾಲೇಜಿನಲ್ಲಿ ವ್ಯಾಸಂಗ ಪಡೆದ ವಿದ್ಯಾರ್ಥಿಗಳು ಸಮಾಜದ ವಿವಿಧ ಉನ್ನತ ಸ್ಥಾನಗಳಲ್ಲಿ ಅಧಿಕಾರ ಪಡೆದು ತಮ್ಮ ಬದುಕಿನ ದಾರಿದೀಪಗಳನ್ನು ಕಂಡುಕೊಳ್ಳಬೇಕು
ಕಾಲೇಜಿಗೆ ಅವಶ್ಯಕ ಸೌಲಭ್ಯಗಳಾದ ರಸ್ತೆ ಸಂಪರ್ಕ, ಬಸ್ ನಿಲ್ದಾಣ , ಕುಡಿಯುವ ನೀರಿನ ಸೌಲಭ್ಯ ಹಾಗೂ ಕಂಪ್ಯೂಟರ್ ಗಳನ್ನು ಶೀಘ್ರದಲ್ಲೇ ದೊರಕಿಸಿಕೊಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ತೋಟೇಶ್ , ಕುಂತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಣ್ಣ, ಕಾಲೇಜು ಪ್ರಾಂಶುಪಾಲರಾದ ಕಲ್ಲೇಶ್. ಡಿ.ಸಿ.ಸಿ ಸದಸ್ಯ ರಾಜೇಂದ್ರ, ತಾಲ್ಲೂಕು ಯುವ ಕಾಂಗ್ರೆಸ್ ಉಪಾಧ್ಯಕ್ಷ ಶಾಂತು ಆರ್ ಬೆಳ್ಳಿ, ಗ್ರಾಮ ಪಂಚಾಯಿತಿ ಸದಸ್ಯ ನಾಗಯ್ಯ ಉಪಸ್ಥಿತರಿದ್ದರು