Tuesday, April 22, 2025
Google search engine

Homeರಾಜ್ಯಪಿಎಸ್​ ಐ, ಸಿಟಿಐ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ: ಅಕ್ರಮ ನಡೆದಿದ್ದರೇ ಕ್ರಮ ತೆಗೆದುಕೊಳ್ಳುತ್ತೇವೆ- ಜಿ....

ಪಿಎಸ್​ ಐ, ಸಿಟಿಐ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ: ಅಕ್ರಮ ನಡೆದಿದ್ದರೇ ಕ್ರಮ ತೆಗೆದುಕೊಳ್ಳುತ್ತೇವೆ- ಜಿ. ಪರಮೇಶ್ವರ

ಬೆಂಗಳೂರು: ಪಿಎಸ್​ ಐ, ಸಿಟಿಐ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಪ್ರಕರಣದ ತನಿಖೆಯನ್ನು ಸಿಸಿಬಿ ನಡೆಸುತ್ತಿದೆ. ಅಕ್ರಮ ನಡೆದಿದ್ದರೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಂಜಾಗ್ರತಾ ಕ್ರಮ ಕೈಗೊಂಡು ಪಿಎಸ್​ಐ ನೇಮಕ ಪರೀಕ್ಷೆ ಮಾಡುತ್ತೇವೆ. ಬೆಂಗಳೂರು ಕೇಂದ್ರದಲ್ಲೇ ಪಿಎಸ್​ ಐ ನೇಮಕಾತಿ ಪರೀಕ್ಷೆ ನಡೆಸಲಾಗುತ್ತದೆ ಎಂದರು.

ಪ್ರಕರಣ ಸಂಬಂಧ ಗುಪ್ತಚರ ಇಲಾಖೆ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಮಾಹಿತಿ ಪಡೆಯುವಾಗ ಆಡಿಯೋ ಬೆಳಕಿಗೆ ಬಂದಿದೆ. ಮಾಹಿತಿ ಕಲೆ ಹಾಕಲು ಫೇಕ್ ಆಡಿಯೋ ಮಾಡಿದ್ದೆ ಅಂತ ಪಿಎಸ್ ಐ ಲಿಂಗಯ್ಯ ಹೇಳಿದ್ದಾರೆ. ಆಡಿಯೋ ಸತ್ಯನಾ, ಅಲ್ವಾ ಅನ್ನೋದರ ಬಗ್ಗೆ ಸಿಸಿಬಿ ತನಿಖೆ ಮಾಡುತ್ತಿದೆ. ಮುಂಜಾಗ್ರತಾ ಕ್ರಮ ಕೈಗೊಂಡು ಪಿಎಸ್​ಐ ನೇಮಕ ಪರೀಕ್ಷೆ ನಡೆಸುತ್ತೇವೆ ಎಂದರು.

ಒಳಮೀಸಲಾತಿ ವಿಚಾರವಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, ಕೇಂದ್ರದ ಮಂತ್ರಿಗಳೇ ಒಳಮೀಸಲಾತಿ ಸಾದ್ಯವಿಲ್ಲ ಅಂತ ಹೇಳಿಕೆ ನೀಡಿದ್ದರು. ಈಗ ಸಂವಿಧಾನ ತಿದ್ದುಪಡಿ ಮಾಡಿ ಅದಕ್ಕೆ ಅವಕಾಶ ಮಾಡಿಕೊಡಿ ಅಂತ ತೀರ್ಮಾನ ಮಾಡಿ ಕಳಿಸಿದ್ದೇವೆ. ಈ ಸಂಬಂಧ ಒಂದು ಸಮಿತಿ ರಚಿಸಿ, ಸಂವಿಧಾನ ತಿದ್ದುಪಡಿ ಮಾಡಬೇಕು. ಮೊದಲನೇ ಹಂತವಾಗಿ ಸಮಿತಿ ರಚಸಿದ್ದಾರೆ. ಸಂವಿಧಾನ ತಿದ್ದುಪಡಿ ಮಾಡುತ್ತಾ ಅಥವಾ ಸಾಧ್ಯವಿಲ್ಲ ಅಂತ ವರದಿ ನೀಡುತ್ತಾರಾ? ಸಮಿತಿ ಸದಸ್ಯರು ಏನು ಹೇಳುತ್ತಾರೆ ನೋಡಬೇಕು ಎಂದರು.

ಲೋಕಸಭೆ ಚುನಾವಣೆಗೆ ಸಚಿವರ ಸ್ಪರ್ಧೆ ವಿಚಾರವಾಗಿ ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೆಲವು ಮಾರ್ಗಸೂಚಿಗಳನ್ನು ನಮಗೆ ಹೇಳಿದ್ದಾರೆ. ನಮ್ಮ ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷರು ಬಂದಿದ್ದರು. ನಮಗೆ ಕೊಟ್ಟ ಜವಾಬ್ದಾರಿಗಳ ಮೇಲೆ ಹೆಸರುಗಳನ್ನು ಕೊಟ್ಟಿದ್ದೆವೆ ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular