Saturday, April 19, 2025
Google search engine

Homeಅಪರಾಧಕಾನೂನುಪಿಎಸ್‌ ಐ ಮರು ಪರೀಕ್ಷೆ: ಕಿವಿ ಮತ್ತು ಬಾಯಿ ಮುಚ್ಚುವಂತಹ ವಸ್ತ್ರ ಧರಿಸುವಂತಿಲ್ಲ

ಪಿಎಸ್‌ ಐ ಮರು ಪರೀಕ್ಷೆ: ಕಿವಿ ಮತ್ತು ಬಾಯಿ ಮುಚ್ಚುವಂತಹ ವಸ್ತ್ರ ಧರಿಸುವಂತಿಲ್ಲ

ಬೆಂಗಳೂರು: ಪಿಎಸ್‌ ಐ ಮರು ಪರೀಕ್ಷೆ ಜನವರಿ 23ರ ಮಂಗಳವಾರ ನಡೆಯಲಿದ್ದು, ಕಿವಿ ಮತ್ತು ಬಾಯಿ ಮುಚ್ಚುವಂತಹ ವಸ್ತ್ರಗಳನ್ನು ಧರಿಸಿ ಪರೀಕ್ಷಾ ಕೊಠಡಿ ಪ್ರವೇಶಿಸುವಂತಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅಭ್ಯರ್ಥಿಗಳಿಗೆ ಸೂಚನೆ ನೀಡಿದೆ.

ಬೆಳಗ್ಗೆ 10.30ರಿಂದ ಮಧ್ಯಾಹ್ನ 12ರ ವರೆಗೆ 50 ಅಂಕಗಳ ಮೊದಲ ಪತ್ರಿಕೆ ಮತ್ತು ಅಪರಾಹ್ನ 1ರಿಂದ 2.30ರ ವರೆಗೆ 150 ಅಂಕಗಳಿಗೆ ಎರಡನೇ ಪತ್ರಿಕೆಯ ಪರೀಕ್ಷೆ ನಡೆಯಲಿದೆ ಎಂದು ಕೆಇಎ ತಿಳಿಸಿದೆ.

ಅಭ್ಯರ್ಥಿಗಳು ಸಾಧ್ಯವಾದಷ್ಟು ಕಾಲರ್‌ ಇಲ್ಲದ ಶರ್ಟ್‌ ಗಳನ್ನು ಹಾಕಬೇಕು. ಜೀನ್ಸ್‌ ಪ್ಯಾಂಟ್‌, ಬೆಲ್ಟ್, ಶೂಗಳನ್ನು ಧರಿಸಿ ಬರುವಂತಿಲ್ಲ. ವಾಟರ್‌ ಬಾಟಲ್‌ ತರುವಂತಿಲ್ಲ. ಮೊದಲನೇ ಅವಧಿ ಮುಗಿದ ಬಳಿಕ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಿಂದ ಹೊರ ಹೋಗುವಂತಿಲ್ಲ ಎಂದು ಸೂಚಿಸಲಾಗಿದೆ.

ಅಭ್ಯರ್ಥಿಗಳು ಬೆಳಗ್ಗೆ 8.30ಕ್ಕೆ ಸರಿಯಾಗಿ ನಿಗದಿತ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಪ್ರವೇಶ ಪತ್ರದ ಜತೆಗೆ ಕಡ್ಡಾಯವಾಗಿ ಗುರುತಿನ ಚೀಟಿ ಅಂದರೆ ಡ್ರೈವಿಂಗ್‌ ಲೈಸೆನ್ಸ್‌, ಪಾಸ್‌ಪೋರ್ಟ್‌, ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ ಇವುಗಳಲ್ಲಿ ಒಂದನ್ನು ಹೊಂದಿರಬೇಕು. ಮೊಬೈಲ್‌ ಫೋನ್‌ ನಿಷೇಧಿಸಿದ್ದು, ಮೊಬೈಲ್‌ ನಲ್ಲಿ ಗುರುತಿನ ಚೀಟಿ ತೋರಿಸುವಂತಿಲ್ಲ ಎಂದು ಸೂಚನೆ ನೀಡಿದೆ.

RELATED ARTICLES
- Advertisment -
Google search engine

Most Popular