ದಲಿತರ ಬಹುದಿನಗಳ ಬಹುತ್ವಕಾಂಕ್ಷೆ ಪಿಟಿಸಿಎಲ್ ಕಾಯ್ದೆ ಗೆ ತಿದ್ದುಪಡಿ ತರುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರ ಪಾಲಿಗೆ ಹೊಸಬೆಳಕನ್ನು ಮೂಡಿಸಿದ್ದಾರೆ. ಎಂದು ಮಾಜಿ ಶಾಸಕ, ಪರಿಶಿಷ್ಟ ಜಾತಿ, ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಎಂ.ಪಿ.ಕುಮಾರ ಸ್ವಾಮಿ ಹೇಳಿದರು.
ಈ ಕುರಿತಂತೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಅವರು, ಸಾವಿರಾರು ದಲಿತ ಜನಾಂಗದ ಜಮೀನುಗಳು ಮೋಸದ ಅಮಿಷಕ್ಕೆ ಒಳಗಾಗಿ ಕಳೆದುಕೊಂಡು ಭೂಗಳ್ಳರ ಪಾಲಾಗಿತ್ತು, ಈ ಕಾಯ್ದೆ ಯನ್ನು ಮುಖ್ಯಮಂತ್ರಿಗಳು ತಿದ್ದುಪಡಿ ತರುವ ಮೂಲಕ ಕರ್ನಾಟಕದಲ್ಲಿ ಮತ್ತೋಬ್ಬ ಅಂಬೇಡ್ಕರ್ ಉದಯಿಸಿದಂತಾಗಿದೆ. ಮುಖ್ಯಮಂತ್ರಿಗಳು ಸರ್ಕಾರ ಬಂದು ಕೇವಲ ಎರಡು ತಿಂಗಳಲ್ಲಿ, ಮೊದಲ ಅಧಿವೇಶನದಲ್ಲೇ ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ತಂದಿರುವುದು.ಬಡವರ, ದಲಿತರ ಮೇಲೆ ಇರುವ ಕಾಳಜಿ,ಬದ್ಧತೆ ಮತ್ತು ಸಮಾಜಿಕ ನ್ಯಾಯವನ್ನು ಎತ್ತಿ ತೋರಿಸುತ್ತದೆ, ಮುಂದಿನ ದಿನಗಳಲ್ಲಿ ದಲಿತರ ಮನೆ,ಮನೆಗಳಲ್ಲಿ ಸಿದ್ದರಾಮಯ್ಯ ನವರು ಸಮಾಜಿಕ ಹರಿಕಾರರಾಗಿ ವಿಜೃಂಭಿಸಲಿದ್ದಾರೆ.ಇದಕ್ಕೆ ಸಹಕರಿಸಿದ ಕಂದಾಯ ಕೃಷ್ಣ ಬೈರೇ ಗೌಡ, ಮಂತ್ರಿ ಮಂಡಲದ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಕಾಯ್ದೆಗಳು ಎಷ್ಟೆ ಪರಿಣಾಮಕಾರಿಯಾಗಿದ್ದರೂ ಅನುಷ್ಠಾನಗೊಳಿಸುವ ಮನಸ್ಸು ಆಸಕ್ತಿ ಮುಖ್ಯ ಎಂದು ಅಂಬೇಡ್ಕರ್ ಹೇಳಿದ್ದರು,ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುನ್ನಡೆಯುತ್ತಿದ್ದಾರೆ ಎಂದು ಹೇಳಿದರು.
