ಹುಣಸೂರು: ಹುಣಸೂರು ಉಪವಿಭಾಗದ ಅಬಕಾರಿ ವಿವಿಧ ಪ್ರಕರಣದಲ್ಲಿ ಇಲಾಖೆಯಿಂದ ಮುಟ್ಟುಗೋಲಾಗಿರುವ ವಾಹನಗಳ ಹರಾಜು ನಡೆಯಲಿದೆ ಎಂದು ಅಬಕಾರಿ ನಿರೀಕ್ಷಕ ಧರ್ಮರಾಜು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಗರದ ಅಬಕಾರಿ ಆವರಣದಲ್ಲಿ ದಿನಾಂಕ 11.02.2025 ರ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಅಬಕಾರಿ ಉಪ ಅಧೀಕ್ಷಕ ಎಂ.ಡಿ. ಮೋಹನ್ ಕುಮಾರ್ ನೇತೃತ್ವದಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಅಬಕಾರಿ ಇಲಾಖೆ ಮುಟ್ಟು ಗೋಲು ಹಾಕಿರುವ ಏಳು ದ್ವಿಚಕ್ರ ವಾಹನ, ಒಂದು ಕಾರನ್ನು ಬಹಿರಂಗ ಹರಾಜು ಹಾಕಲಾಗುವುದು ಎಂದು ತಿಳಿಸಿದ್ದಾರೆ.