ಬಿವೈಎಫ್ – ಬುಡೋಳಿ ಯೂತ್ ಫೆಡರೇಶನ್ (ರಿ) ನೇತೃತ್ವದಲ್ಲಿ ‘ಎಸ್ ಐಆರ್ ಮಾಹಿತಿ ಶಿಬಿರ’ವು ಜೂನ್ 28ರ ರವಿವಾರ ಬೆಳಿಗ್ಗೆ ಹತ್ತು ಗಂಟೆಗೆ ಬುಡೋಳಿ ಸದಾಶಿವ ಬೀಲ್ಡಿಂಗ್ ನಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ಸಂಸ್ಥೆಯು ಮಾಹಿತಿ ನೀಡಿದೆ. ಸಂವಿಧಾನಬದ್ದವಾದ ಈ ಹಕ್ಕನ್ನು ಉಳಿಸಿಕೊಳ್ಳಲು ನಾವು ಮಾಡಬೇಕಾದ ಕರ್ತವ್ಯ ಏನು?, ಗಣತಿ ನಮೂನೆ ಭರ್ತಿ ಮಾಡುವುದು ಹೇಗೆ?, ಬಿಎಲ್ ಓ ಗಳೊಂದಿಗೆ ನಿಮ್ಮ ಸಹಕಾರ ಹೇಗಿರಬೇಕು ಎಂಬುದರ ಕುರಿತು ಈ ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಪುರುಷರು ಅಲ್ಲದೇ ಸ್ತ್ರೀಯರಿಗೆ ಕೂಡಾ ಸ್ಥಳವಕಾಶವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವರದಿ: ಶಂಶೀರ್ ಬುಡೋಳಿ



