Monday, April 21, 2025
Google search engine

Homeರಾಜ್ಯಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಅಗತ್ಯ: ಎಚ್.ಎಸ್.ಶ್ರೀನಿವಾಸ್

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಅಗತ್ಯ: ಎಚ್.ಎಸ್.ಶ್ರೀನಿವಾಸ್

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಸರ್ಕಾರಿ ಶಾಲೆಗಳ ಅಭಿವೃದ್ದಿ ಮತ್ತು ಶೈಕ್ಷಣಿಕ ಪ್ರಗತಿ ಕಾಣಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಹೊಸೂರು ಸಂಯುಕ್ತ ಪದವಿ ಪೂರ್ವ ಕಾಲೇಜಿನ ಉಪಾಧ್ಯಕ್ಷ ಎಚ್.ಎಸ್.ಶ್ರೀನಿವಾಸ್ ಹೇಳಿದರು

ಸಾಲಿಗ್ರಾಮ ತಾಲ್ಲೋಕಿನ ಹೊಸೂರು ಗ್ರಾಮದ   ಸರ್ಕಾರಿ ಸಂಯುಕ್ತ ಪದವಿ  ಪದವಿಪೂರ್ವ ಕಾಲೇಜಿನ ಮುಂಬಾಗ ಆಳವಡಿಸಿಲಾದ ನೂತನ ಗೇಟ್ ಉದ್ಘಾಟಿಸಿ  ಅವರು ಮಾತನಾಡಿದರು.

ಯಾವುದೇ ಸರ್ಕಾರದ ಶಿಕ್ಷಣ ಸಂಸ್ಥೆಗಳು ಸರ್ಕಾರದ ಹಣವನ್ನೇ ನಂಬಿ ಕೂರದೇ ದಾನಿಗಳು, ಉಳ್ಳವರು ಶಾಲಾಕಾಲೇಜುಗಳ ಅವಶ್ಯಕತೆಯಿರುವ ಕಡೆಗಳಲ್ಲಿ ತಮ್ಮ ಧನಸಹಾಯದ ಮೂಲಕ ಅಭಿವೃದ್ದಿಪಡಿಸಬಹುದಾಗಿದ್ದು ಇದರಿಂದ ಗುಣಮಟ್ಟದ ಶಿಕ್ಷಣಕ್ಕೂ ಸಹಾಯವಾಗಲಿದೆ ಎಂದು ಹೇಳಿದರು.

ಇದೇ ಸಂಧರ್ಭದಲ್ಲಿ ಕಾಲೇಜಿಗೆ ಗೇಟ್ ಉಡುಗೋರೆಯಾಗಿ ನೀಡಿದ ಹೊಸೂರು ಕೃಷಿಪತ್ತಿನ ಸಹಕಾರ ಸಂಘದ ಮಾಜಿ‌ ಅಧ್ಯಕ್ಷ ಮತ್ತು ಉದ್ಯಮಿ ಎಸ್.ಟಿ ಕೀರ್ತಿ ಅವರನ್ನು  ಸನ್ಮಾನಿಸಲಾಯಿತು ಅಲ್ಲದೇ ಈ ಕಾಲೇಜು ಮಂಜೂರಿಗೆ ಎಸ್.ಟಿ.ಕೀರ್ತಿ ಅವರ ಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು

ಈ ಸಂಧರ್ಭದಲ್ಲಿ ಹೊಸೂರು ಡೈರಿ ಅಧ್ಯಕ್ಷ  ಹೆಚ್.ಜೆ ರಮೇಶ್, ಕಾಂಗ್ರೇಸ್ ಮುಖಂಡರಾದ ಡೈರಿ ಮಾದು, ಎಚ್.ಎಸ್. ರವಿ, ಪರಶುರಾಮ್,ಕಾಲೇಜಿನ ಉಪನ್ಯಾಶಕ ಜೋಶಿ ಮತ್ತು  ಶಿಕ್ಷಕವೃಂದ ಹಾಜರಿದ್ದರು.

RELATED ARTICLES
- Advertisment -
Google search engine

Most Popular