ಹೊಸೂರು: ಯಾವುದೇ ಮುಲಾಜಿಗೆ ಒಳಗಾಗದೇ ಸಮಾಜದ ಸಮಸ್ಯೆಗಳನ್ನು ಎತ್ತಿ ಹಿಡಿಯುವ ಪತ್ರಕರ್ತರಿಗೆ ಸಾರ್ವಜನಿಕರ ಬೆಂಬಲ ಸದಾ ಇರುತ್ತದೆ ಎಂದು ಕೆ.ಆರ್.ನಗರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಹೊಸೂರು ಎ.ಕುಚೇಲ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಹೊಸೂರು ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ಏರ್ಪಡಿಸಿದ್ದ ಕೆ.ಆರ್.ನಗರ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ವಿನಯ್ ದೊಡ್ಡಕೊಪ್ಪಲು ಮತ್ತು ಕಾರ್ಯದರ್ಶಿ ಆನಂದ್ ಹೊಸೂರು ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪತ್ರಕರ್ತರು ಈ ಸಮಾಜವನ್ನು ತಿದ್ದುವ ಗುರುವಿದ್ದಂತೆ ಇವರುಗಳು ಯಾವುದೇ ಸಂದರ್ಭದಲ್ಲಿಯು ತಮ್ಮವೃತ್ತಿಯಲ್ಲಿ ಪವಿತ್ರತೆಯನ್ನು ಕಾಪಾಡಿಕೊಳ್ಳಬೇಕು ಇದರಿಂದ ಉತ್ತಮ ಪತ್ರಕರ್ತನಾಗಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಗ್ರಾಮೀಣ ಪ್ರದೇಶದ ಪತ್ರಕರ್ತರು ಪಟ್ಟಣದಲ್ಲಿರುವ ಪತ್ರಕರ್ತರ ಸಂಘದ ಅಧ್ಯಕ್ಷ ಮತ್ತು ಕಾರ್ಯದರ್ಶಿಯಾಗಿ ಆಯ್ಕೆಯಾಗುವ ಅವಕಾಶ ದೊರೆತಿರುವುನ್ನು ತಾವುಗಳು ಸದುಪಯೋಗ ಪಡಿಸಿಕೊಂಡು ಸಾರ್ವಜನಿಕ ಕ್ಷೇತ್ರದಲ್ಲಿ ನೊಂದವರ ಪರವಾಗಿ ಕೆಲಸ ಮಾಡಿ ಎಂದರು
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ರಾಜೇಗೌಡ,ಟಿಎಪಿಸಿಎಂಎಸ್ ನಿರ್ದೇಶಕ ಎಸ್.ಟಿ.ಕೀರ್ತಿ,ತಾ.ಪಂ.ಮಾಜಿ ಸದಸ್ಯ ಲೋಕೇಶ್, ಸಂಘದ ಅಧ್ಯಕ್ಷೆ ಕಮಲಮ್ಮಶಿವಣ್ಣ,ಉಪಾಧ್ಯಕ್ಷ ನವೀನ್, ನಿರ್ದೇಶಕರಾದ ಎಚ್.ಆರ್. ಕೃಷ್ಣಮೂರ್ತಿ, ಎಚ್.ಎನ್.ರಮೇಶ್, ಎಚ್.ಎಸ್.ಜಗದೀಶ್,ಹುಚ್ಚೇಗೌಡ,ರಾಜೇಗೌಡ, ಕಲ್ಯಾಣಮ್ಮ,ಕೆಂಪನಾಯಕ, ಹಳಿಯೂರು ಗ್ರಾ.ಪಂ.ಮಾಜಿಅಧ್ಯಕ್ಷ ಕೃಷ್ಣ,ಮಾಜಿಉಪಾಧ್ಯಕ್ಷ ಭಾಸ್ಕರ್, ಹೊಸೂರು ಮುತ್ತೂಟ್ ಮ್ಯಾನೇಜರ್ ಜಯಶಂಕರ್ ಕೋಟಿ, ಮುಖಂಡ ಮೂಗರಾಘವೇಂದ್ರ, ಸಂಘದ ಸಿಇಓ ಚಂದ್ರಕಲಾ, ಸಿಬ್ಬಂದಿಗಳಾದ ರವಿ,ಅರುಣ,ಮಹದೇವ,ಸಂತೋಷ್ , ಹಳಿಯೂರು ಬಡಾವಣೆ ಡೈರಿ ಕಾರ್ಯದರ್ಶಿ ರಾಜೇಶ್ ಇದ್ದರು.