ಮೈಸೂರು: ಮಿಣುಕು ಹುಳುವಿನಂತೆ ಚುಟುಕು ಸಾಹಿತ್ಯ ಹೆಚ್ಚು ಪ್ರಕಾಶಿಸುತ್ತದೆ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ತಿಳಿಸಿದರು.
ಮೈಸೂರಿನ ವಿಜಯನಗರದಲ್ಲಿರುವಕನ್ನಡ ಸಾಹಿತ್ಯ ಭವನದಲ್ಲಿಜಿಲ್ಲಾಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕ ಮತ್ತುಜಿಲ್ಲಾಚುಟುಕು ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ಆಯೋಜಿಸಿದ್ದ ೭೬ನೇ ಸ್ವಾತಂತ್ರ್ಯೋವದ ಸವಿ ನೆನಪಿನ ಚುಟುಕು ಕವಿಗೋಷ್ಠಿ ಮತ್ತು ಮಹಿಳಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಮಹತ್ವದ ಪಾತ್ರ ವಹಿಸಿದ್ದರು. ಅದರಂತೆಇಂದು ನವ ಸಮಾಜ ನಿರ್ಮಾಣ ಮಾಡುವುದರಲ್ಲಿ ಬಹುಮುಖ್ಯ ಪಾತ್ರ ವಹಿಸಿಬೇಕಿದ್ದು, ಹಂತ ಹಂತವಾಗಿಅದು ನಡೆಯುತ್ತಿದೆಎಂದರು.
ಚುಟುಕುಗಳ ವೈಶಿಷ್ಯ ಎಂದರೆ ಮಿಣುಕು ಹುಳವಿದ್ದಂತೆ ಅವು ಹೆಚ್ಚು ಪ್ರಕಾಶಿಸುತ್ತದೆ. ಅವು ಸ್ವಯಂ ಪ್ರಕಾಶಮಾನವಾಗಿದ್ದು, ಅದುರಾತ್ರಿಯನ್ನು ಹಗಲು ಮಾಡುತ್ತವೆ. ಮಿಣುಕು ಹುಳುವಿನಂತೆ ಚುಟುಕು ಕವಿಗಳು ಒಳ ಬೆಳಕನ್ನು ಚೆಲ್ಲಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಬೇರೆ ಪ್ರಕಾರದ ಸಾಹಿತ್ಯವನ್ನು ಬೇರೆಕಡೆಖರೀದಿ ಮಾಡಿದ ಬೆಳಕನ್ನು ಚೆಲ್ಲುತ್ತಿದ್ದಾರೆಎಂದು ಬೇಸರ ವ್ಯಕ್ತಪಡಿಸಿದರು.
ಮಿಣುಕು ಹುಳುಗಳು ಹೇಗೆ ತಂಪಾದ ಬೆಳಕನ್ನು ಸೂಸುತ್ತದೆ. ಹಾಗೇ ಚುಟುಕು ಕವಿಗಳು ಚುಟುಕುಗಳ ಮೂಲಕ ಅನುಭವ, ಭಾವ ಮತ್ತು ಅನುಭಾವವನ್ನು ವ್ಯಕ್ತಪಡಿಸಿಬೇಕು. ಚುಟುಕು ಕವಿ ಸುತ್ತಲಿನ ಜಗತ್ತನಕಾಣಬೇಕು. ಅದು ಬಹಳ ಮುಖ್ಯಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕದಅಧ್ಯಕ್ಷರಾಗಿಡಾ.ರತ್ನಹಾಲಪ್ಪಗೌಡಅಧಿಕಾರ ಸ್ವೀಕರಿಸಿದರು. ಚುಟುಕು ಸಾಹಿತ್ಯ ಪರಿಷತ್ತು ಸಂಸ್ಥಾಪಕ ಡಾ.ಎಂ.ಜಿ.ಆರ್.ಅರಸ್ ಪುಸ್ತಕ ತಾಂಬೂಲ ವಿತರಿಸಿದರು.
ಮಾಜಿ ಸಚಿವಎಂ.ಶಿವಣ್ಣ, ಚುಟುಕು ಸಾಹಿತ್ಯ ಪರಿಷತ್ತುರಾಜ್ಯಾಧ್ಯಕ್ಷತೋಂಟದಾರ್ಯ ಮತ್ತು ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೆರೆಗೋಪಾಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.