Friday, April 11, 2025
Google search engine

Homeರಾಜ್ಯಸುದ್ದಿಜಾಲನ.18ರಂದು ಪುನೀತ್ ರಾಜ್‍ಕುಮಾರ್ ಪ್ರಶಸ್ತಿ ಪ್ರದಾನ

ನ.18ರಂದು ಪುನೀತ್ ರಾಜ್‍ಕುಮಾರ್ ಪ್ರಶಸ್ತಿ ಪ್ರದಾನ

ಬೆಂಗಳೂರು: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಡಾ.ಪುನೀತ್ ರಾಜ್‍ಕುಮಾರ್ ಪ್ರಶಸ್ತಿ ನೀಡಿ ಗೌರವಿಸಲು ಬಿಬಿಎಂಪಿ ನೌಕರರ ಕನ್ನಡ ಸಂಘ ತೀರ್ಮಾನಿಸಿದೆ. ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ನ.18 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಅಮೃತ್‍ರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮವನ್ನು ಬಿಬಿಎಂಪಿ ಆಡಳಿತಾಗಾರ ರಾಕೇಶ್‍ಸಿಂಗ್ ಉದ್ಘಾಟಿಸಲಿದ್ದಾರೆ.

ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಖ್ಯಾತ ಚಿತ್ರ ನಟ ರಮೇಶ್ ಅರವಿಂದ್, ನಟಿಯರಾದ ಭವ್ಯ, ಭಾವನಾ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಮೇಯರ್ ಜೆ.ಹುಚ್ಚಪ್ಪ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ವಿಶೇಷ ಆಯುಕ್ತರಾದ ತ್ರಿಲೋಕ್ ಚಂದ್ರ, ಮೌನೀಶ್ ಮೌದ್ಗಿಲ್, ಹರೀಶ್ ಕೆ, ಉಪ ಅಯುಕ್ತ ಮಂಜುನಾಥ್ ಸ್ವಾಮಿ, ಜಂಟಿ ಆಯುಕ್ತೆ ಪಲ್ಲವಿ, ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ ಮತ್ತಿರರು ಹಾಜರಿರಲಿದ್ದಾರೆ.
ಕರ್ನಾಟಕ ವಿಚಾರ ವೇದಿಕೆ ಅಧ್ಯಕ್ಷ ಪಾಲನೇತ್ರ, ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಗುರುದತ್ತ, ಕರ್ನಾಟಕ ಅಮೆಚೂರ್ ಯೋಗ ಕ್ರೀಡಾ ಸಂಘದ ಅಧ್ಯಕ್ಷ ಜಿ.ಎನ್.ಕೃಷ್ಣ ಮೂರ್ತಿ, ಖ್ಯಾತ ಚಿತ್ರನಟ, ನಟಿಯರಾದ ಸುಂದರ್ ರಾಜ್,ಪ್ರಮೀಳಾ ಜೋಷಾಯಿ, ರಕ್ಷಾ, ರಿಷಿಗೌಡ, ಪ್ರೇಮಗೌಡ, ಅಪೂರ್ವ, ಪ್ರತಿಭಾ, ಸಿಂ ಆಸ್ಪತ್ರೆ ಸಾರ್ವಜನಿಕ ಸಂಪರ್ಕಾಕಾರಿ ಸುಚಿತ್ರಾ, ಅಂತಾರಾಷ್ಟ್ರೀಯ ಡೊಳ್ಳು ಕುಣಿತ ಕಲಾವಿದ ಡೊಳ್ ಚಂದ್ರು ಸೇರಿದಂತೆ ಮಾಧ್ಯಮ ಲೋಕದ ಹಲವಾರು ಮಂದಿಗೆ ಡಾ.ಪುನೀತ್ ರಾಜ್‍ಕುಮಾರ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಅದೇ ರೀತಿ ಬಿಬಿಎಂಪಿಯ ಉತ್ತಮ ಸೇವೆ ಸಲ್ಲಿಸಿರುವ ದಕ್ಷ ಅಕಾರಿಗಳಿಗೂ ಪುನೀತ್‍ರಾಜ್‍ಕುಮಾರ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅಮೃತ್‍ರಾಜ್ ವಿವರಣೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular