ಹುಣಸೂರು: ಹದಿಹರೆಯದ ವರ್ಗ (Teen categary) ಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗುವ ಮೂಲಕ ಹುಣಸೂರಿನ ಮಾರುತಿ ಬಡಾವಣೆಯ ವಿದ್ಯಾರ್ಥಿನಿ ಪುಣ್ಯ ವಿ. ಸಾಧನೆ ಗೈದು ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಹುಣಸೂರು ಖಾಸಗಿ ವಿದ್ಯಾ ಸಂಸ್ಥೆಯ 8ನೇ ತರಗತಿ ವಿದ್ಯಾರ್ಥಿಯಾದ ಇವರು ನಮ್ಮ ಸಂಸ್ಕೃತಿಯ ಹೆಮ್ಮೆಯ ವಿಷಯವಾದ ಶ್ರೀ ರಾಮ ರಕ್ಷಾ ಸ್ತೋತ್ರ ವನ್ನು ಕೇವಲ ಮೂರು ನಿಮಿಷ ಆರು ಸೆಕೆಂಡ್ , 59 ಮಿಲಿ ಸೆಕೆಂಡ್ ಗಳಲ್ಲಿ ಪ್ರಸ್ತುತ ಪಡಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ತಮ್ಮ ಪ್ರತಿಭೆಯನ್ನು ದಾಖಲಿಸಿದ್ದಾರೆ.
ಕುಮಾರಿ ಪುಣ್ಯ ವಿ. ನಗರದ ಮಾರುತಿ ಬಡಾವಣೆಯ ಹೆಚ್.ಎನ್.ವೆಂಕಟೇಶ್ ಹಾಗೂ ಎಸ್.ಪಿ.ಸಂಧ್ಯಾ ರವರ ಪುತ್ರಿಯಾಗಿದ್ದಾರೆ.
ಇದರ ಮಾಹಿತಿ ಪಡೆದಿರುವ ಶಾಸಕ ಜಿ.ಡಿ.ಹರೀಶ್ ಗೌಡರು ತಾಲೂಕು ಆಡಳಿತದಿಂದ ಆಚರಿಸುವ ಗಣರಾಜ್ಯೋತ್ಸವದಂದು ಯುವ ಪ್ರತಿಭೆ ಪುಣ್ಯ .ಪಿ ಳನ್ನು ಅಭಿನಂದಿಸಲು ಸೂಚಿಸಿದ್ದಾರೆ. ಹಾಗೆ ಮಾಜಿ ಶಾಸಕ ಹೆಚ್.ಪಿ .ಮಂಜುನಾಥ್ ರವರು ವಿಷಯ ತಿಳಿದು ವಿದ್ಯಾರ್ಥಿ ಪುಣ್ಯ ವಿ. ಮನೆಗೆ ಭೇಟಿ ನೀಡಿ ಅಭಿನಂದಿಸಿದ್ದಾರೆ.