Saturday, April 19, 2025
Google search engine

Homeರಾಜ್ಯತಿರುಪತಿಯಲ್ಲಿ ಶುದ್ಧೀಕರಣದ ಯಾಗ

ತಿರುಪತಿಯಲ್ಲಿ ಶುದ್ಧೀಕರಣದ ಯಾಗ

ಅಮರಾವತಿ: ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಹಿನ್ನೆಲೆಯಲ್ಲಿ ತಿರುಪತಿ ದೇವಾಲಯ ಶುದ್ಧೀಕರಣ ಕಾರ್ಯ ನಡೆಯಿತು. ತಿರುಮಲದ ದೇವಾಲಯದ ಸುತ್ತ ಅರ್ಚಕರು ಸಂಪ್ರೋಕ್ಷಣೆ ಮಾಡಿ ಹಾಲು, ತುಪ್ಪ, ಮೊಸರು, ಗಂಜಲ, ಸಗಣಿ ಬಳಸಿ ದೇವಾಲಯ ಶುದ್ಧೀಕರಣ ಮಾಡಿದರು.

ಇಂದಿನಿಂದ ತಿರುಪತಿ ತಿಮ್ಮಪ್ಪನ ದೇವಾಲಯದ ಶುದ್ಧೀಕರಣದ ಯಾಗ ನಡೆಯುತ್ತಿದೆ. ಶುದ್ದೀಕರಣ ಸಂದರ್ಭದಲ್ಲಿ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶ ಇರಲಿಲ್ಲ. ಪವಿತ್ರೋತ್ಸವ ಮುಗಿದ ಬಳಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಬೆಳಗ್ಗೆ ೬ ಗಂಟೆಯಿಂದ ದೇವಾಲಯ ಪವಿತ್ರೋತ್ಸವ, ಮಹಾಶಾಂತಿ ಯಾಗ ಆರಂಭವಾಯಿತು. ವಿವಿಧ ಪಂಡಿತರು, ವೇದಶಾಸ್ತ್ರ ವಿದ್ವಾಂಸರು ಶುದ್ಧೀಕರಣದಲ್ಲಿ ಭಾಗಿಯಾಗಿದ್ದರು. ತಿರುಪತಿ ತಿರುಮಲದ ಪ್ರಧಾನ ಅರ್ಚಕರು, ಆಗಮ ಪಂಡಿತರಿಂದ ಪವಿತ್ರೋತ್ಸವ ನೆರವೇರಿತು. ಭಕ್ತರ ಮನಸ್ಸಿನಲ್ಲಿರುವ ಅಪವಿತ್ರತೆ ಹೋಗಲಾಡಿಸಲು ಟಿಟಿಡಿಯಿಂದ ಯಾಗ ನಡೆಯಿತು.

RELATED ARTICLES
- Advertisment -
Google search engine

Most Popular