Friday, April 18, 2025
Google search engine

Homeಸಿನಿಮಾಪುಷ್ಪ-2:  ಅಲ್ಲು ಅರ್ಜುನ್ - ರಶ್ಮಿಕಾ ಸಿನಿಮಾಗೆ ಶ್ರೀಲೀಲಾ ಎಂಟ್ರಿ

ಪುಷ್ಪ-2:  ಅಲ್ಲು ಅರ್ಜುನ್ – ರಶ್ಮಿಕಾ ಸಿನಿಮಾಗೆ ಶ್ರೀಲೀಲಾ ಎಂಟ್ರಿ

ಹೈದರಾಬಾದ್: ಟಾಲಿವುಡ್‌ ನ ಬಿಗೆಸ್ಟ್‌ ಸಿನಿಮಾವೆಂದೇ ಹೈಪ್‌ ಕ್ರಿಯೇಟ್‌ ಆಗಿರುವ ʼಪುಷ್ಪ-2ʼ ಶೂಟಿಂಗ್‌ ಹಂತದಲ್ಲೇ  ಸದ್ದು ಮಾಡುತ್ತಿದೆ. ಒಂದಲ್ಲ ಒಂದು ಕಾರಣದಿಂದ ಸುದ್ದಿಯಾಗುವ ಅಲ್ಲು ಅರ್ಜುನ್‌ ಅವರ ʼಪುಷ್ಪ-2ʼ ಈ ಬಾರಿ ಮತ್ತೊಂದು ಬಿಗ್‌ ಅಪ್ಡೇಡ್‌ ಬಗ್ಗೆ ಸೌಂಡ್‌ ಮಾಡಿದೆ.

2021 ರಲ್ಲಿ ಬಂದ ʼಪುಷ್ಪʼ ಸಿನಿಮಾ ಸೂಪರ್‌ ಹಿಟ್ ಆಗಿತ್ತು. ಕೆಜಿಎಫ್‌ ರೇಂಜಿಗೆ ಹೈಪ್‌ ಕ್ರಿಯೇಟ್‌ ಮಾಡಿ, ಬಾಕ್ಸ್‌ ಆಫೀಸ್‌ ನಲ್ಲಿ ಕೋಟಿ ಕೋಟಿ ಗಳಿಕೆ ಮಾಡಿತ್ತು. ಸಿನಿಮಾದ ಎರಡನೇ ಪಾರ್ಟ್‌ ನ ಬಗ್ಗೆ ದೊಡ್ಡ ನಿರೀಕ್ಷೆಗಳಿವೆ. ಸಮಂತಾ ʼಪುಷ್ಪʼ ಸಿನಿಮಾದಲ್ಲಿ ಸೊಂಟ ಬಳುಕಿಸಿದ್ದರು. ‘ಊ ಅಂಟವಾ’ ಹಾಡು ಸಿಕ್ಕಾಪಟ್ಟೆ ವೈರಲ್‌ ಆಗುವುದರ ಜೊತೆಗೆ ಪಡ್ಡೆ ಹೈಕಳ ಗಮನ ಸೆಳೆದಿತ್ತು.

ʼಪುಷ್ಪ-2ʼ ಸಿನಿಮಾದಲ್ಲೂ ಡ್ಯಾನ್ಸ್‌ ನಂಬರ್‌ ಇದೆ ಎನ್ನಲಾಗಿದ್ದು, ಇದರಲ್ಲಿ ಸಮಂತಾ ಅವರೇ ಹೆಜ್ಜೆ ಹಾಕಲಿದ್ದಾರೆ ಎಂದು ಮೊದಲು ಹೇಳಲಾಗಿತ್ತು. ಆದರೆ ಇದು ಅಧಿಕೃತವಾಗಿಲ್ಲ. ಸಿನಿಮಾದಲ್ಲಿ ಡ್ಯಾನ್ಸ್‌ ನಂಬರ್‌ ಗೆ ಹೆಜ್ಜೆ ಹಾಕಲಿದ್ದಾರೆ ಎಂದು ಕೆಲ ನಟಿಯರ ಹೆಸರು ಗಾಸಿಪ್‌ ಆಗಿ ಹರಿದಾಡಿತ್ತು. ಇದೀಗ ಈ ಸಾಲಿಗೆ ಮತ್ತೊಬ್ಬ ಜನಪ್ರಿಯ ಸೌತ್‌ ನಟಿ ಸೇರಿದ್ದಾರೆ.

ಬಹುಭಾಷಾ ನಟಿ ಶ್ರೀಲೀಲಾ ಅವರು ʼಪುಷ್ಪ-2ʼ ಸಿನಿಮಾದಲ್ಲಿ ಸ್ಪೆಷೆಲ್‌ ಸಾಂಗ್‌ ಗೆ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗಿದೆ. ‘ಊ ಅಂಟವಾ’ ಹಾಡಿನಂತೆ ʼಪುಷ್ಪ-2ʼ ನಲ್ಲೂ ಇಂಥದ್ದೊಂದು ಹಾಡು ಇರಲಿದೆ. ಇದರಲ್ಲಿ ನಟಿ ಶ್ರೀಲೀಲಾ ಅವರು ಸೊಂಟ ಬಳುಕಿಸಲಿದ್ದಾರೆ ಎನ್ನುವ ಸುದ್ದಿ ಟಾಲಿವುಡ್‌ ವಲಯದಲ್ಲಿ ಹರಿದಾಡುತ್ತಿದೆ.

ಸದ್ಯ ಈ ಗಾಸಿಪ್‌ ವೈರಲ್‌ ಆಗಿದ್ದು, ಚಿತ್ರತಂಡದವರು ಇದನ್ನು ಅಧಿಕೃತಗೊಳಿಸಿಲ್ಲ. ಒಂದು ವೇಳೆ ಈ ಸುದ್ದಿ ನಿಜವಾದರೆ ಶ್ರೀಲೀಲಾ ವೃತ್ತಿ ಬದುಕಿನಲ್ಲಿ, ಇದು ಬಿಗ್‌ ಬ್ರೇಕ್ ನೀಡುವ ಸಾಧ್ಯತೆಯಿದೆ. ಸದ್ಯ ಶ್ರೀಲೀಲಾ ಮಹೇಶ್ ಬಾಬು ಅವರ ‘ಗುಂಟೂರ್ ಕಾರಮ್’, ಬಾಲಕೃಷ್ಣ ಅವರ ʼಭಗವಂತ್‌ ಕೇಸರಿʼರಾಮ್ ಪೋತಿನೇನಿ ಜೊತೆ ‘ಸ್ಕಂದ’, ಮತ್ತು ವಿಜಯ್ ದೇವರಕೊಂಡ ಜೊತೆ ‘ವಿಡಿ 12’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

RELATED ARTICLES
- Advertisment -
Google search engine

Most Popular