Friday, April 10, 2026
Google search engine

Homeಅಪರಾಧಝಾಂಬಿ ಡ್ರಗ್ ವದಂತಿಗೆ ಬ್ರೇಕ್ : ಝಾಂಬಿ ಡ್ರಗ್ ಅನ್ನೋದೇ ಇಲ್ಲ : ಪರಮೇಶ್ವರ್

ಝಾಂಬಿ ಡ್ರಗ್ ವದಂತಿಗೆ ಬ್ರೇಕ್ : ಝಾಂಬಿ ಡ್ರಗ್ ಅನ್ನೋದೇ ಇಲ್ಲ : ಪರಮೇಶ್ವರ್

ಬೆಂಗಳೂರು : ನಗರದಲ್ಲಿ ಝಾಂಬಿ ಡ್ರಗ್ ವದಂತಿಗೆ ಬ್ರೇಕ್ ಬಿದ್ದಿದೆ. ಝಾಂಬಿ ಡ್ರಗ್‌ ಅನ್ನೋದೇ ಇಲ್ಲ, ಅದು ಸತ್ಯಕ್ಕೆ ದೂರ ಅಂತ ಗೃಹ ಸಚಿವ ಪರಮೇಶ್ವರ್‌ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಝಾಂಬಿ ಡ್ರಗ್ ಇದೆ ಎನ್ನಲಾದ ವಿಡಿಯೋ ವೈರಲ್ ಆಗುತ್ತಿದ್ದಂತೆ ಬೆನ್ನುಬಿದ್ದ ಸಿಸಿಬಿ ಪೊಲೀಸರು, ತೀವ್ರಕಾರ್ಯಾಚರಣೆ ನಡೆಸಿದ್ದಾರೆ. ಸಿಸಿಬಿ ಡಿಸಿಪಿ ಕಾಸಿಂ ಸಾಬ್ ಮೇಲುಸ್ತುವಾರಿಯಲ್ಲಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಯ್ತು. ವಿಡಿಯೋ ಮಾಡಿ ವೈರಲ್ ಮಾಡಿದ ವ್ಯಕ್ತಿಯನ್ನ ಬಾಗಲೂರು ಪೊಲೀಸ್ರು ಬಂಧಿಸಿದ್ದಾರೆ. ವಿಡಿಯೋ ಮಾಡಿ ಇನ್‌ಸ್ಟಾದಲ್ಲಿ ಅಪ್ಲೋಡ್ ಮಾಡಿದ್ದ ಹೇಮಂತ್ ಬಂಧಿತ ಆರೋಪಿ ಆಗಿದ್ದಾನೆ.

ಇನ್ನು, ಬೆಂಗಳೂರಿನಲ್ಲಿ ಝಾಂಬಿ ಡ್ರಗ್ ವದಂತಿಯನ್ನ ಗೃಹ ಸಚಿವ ಪರಮೇಶ್ವರ್ ಅಲ್ಲಗೆಳೆದಿದ್ದಾರೆ. ಬಂಧಿತ ಆರೋಪಿ ಹರಿಯಾಣ, ಪಂಜಾಬ್ ಮೂಲದ ವ್ಯಕ್ತಿ. ಆತ ಲಾರಿ ಡ್ರೈವರ್, ಆತನಿಗೆ ಡ್ರಿಂಕ್ಸ್ ಅಭ್ಯಾಸವಿತ್ತು. ಯಾವ ಝಾಂಬಿಯೂ ಇಲ್ಲ. ಏನೂ ಇಲ್ಲ ಅಂತಾ ಸ್ಪಷ್ಟಪಡಿಸದ್ದಾರೆ.

ಝಾಂಬಿ ಡ್ರಗ್ಸ್ ಅನ್ನೋದು ಇಲ್ಲ, ಅದು ಸತ್ಯಕ್ಕೆ ದೂರ. ಯಾರು ಆತನ ಪೋಟೋ ಪೋಸ್ಟ್ ಮಾಡಿದ್ನೋ ಆತನನ್ನ ಬಂಧಿಸಲಾಗಿದೆ ಅಂತಾ ತಿಳಿಸಿದರು. ಇನ್ನೂ ನಿನ್ನೆಯಷ್ಟೇ ಝಾಂಬಿ ಡ್ರಗ್‌ ಬಗ್ಗೆ ವಿಡಿಯೋ ಹಂಚಿಕೊಂಡಿದ್ದ ದುನಿಯಾ ವಿಜಯ್‌ಗೆ ಸಂಕಷ್ಟ ಎದುರಾಗಿದೆ.

ಮಾಹಿತಿ ತಿಳಿಯದೇ ಅಪಪ್ರಚಾರ ನಡೆಸಿದ ದುನಿಯಾ ವಿಜಯ್, ನಿವೃತ್ತ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್‌ಗೆ ಪೊಲೀಸರು ನೋಟಿಸ್ ನೀಡಲು ಮುಂದಾಗಿದ್ದಾರೆ.

RELATED ARTICLES
- Advertisment -
Google search engine

Most Popular