ಮಂಗಳೂರು (ದಕ್ಷಿಣ ಕನ್ನಡ): ತರಗತಿ ನಡಿತಾ ಇದ್ದಾಗ್ಲೇ ಕ್ಲಾಸ್ ರೂಮಿಗೆ ನಾಗರಹಾವಿನ ಮರಿ ನುಗ್ಗಿದಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಿ ಸಿ ಕಾಲೇಜಿನಲ್ಲಿ ಇಂದು ನಡೆದಿದೆ.
ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು ವಿದ್ಯಾರ್ಥಿಗಳು ಕ್ಲಾಸ್ ರೂಮ್ ಒಳಗೆ ಇರುವಾಗಲೇ ನಾಗರಹಾವಿನ ಮರಿ ಎಂಟ್ರಿ ಕೊಟ್ಟಿದೆ. ಕೂಡಲೇ ಸ್ನೇಕ್ ತೇಜಸ್ ಇವರಿಗೆ ಮಾಹಿತಿಯನ್ನು ನೀಡಲಾಗಿದ್ದು ಇವರು ಸ್ಥಳಕ್ಕೆ ಆಗಮಿಸಿ, ನಾಗರಹಾವಿನ ಮರಿಯನ್ನು ರಕ್ಷಣೆ ಮಾಡಿದ್ದಾರೆ. ತದನಂತರ ಹಾವಿನ ಮರಿಯನ್ನು ಕ್ಲಾಸ್ ರೂಮಿಂದ ಸುರಕ್ಷತೆ ಸ್ಥಳಕ್ಕೆ ಬಿಡಲಾಯಿತು.