ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಯಳಂದೂರು ಡಾಕ್ಟರ್ ಎಂದೇ ಪ್ರಖ್ಯಾತಿಯನ್ನು ಹೊಂದಿರುವ ಡಾ. ರಮೇಶ್ ಉಡುಪ ಕುಟುಂಬದಿಂದ ಉತ್ತಮ ಗುಣಮಟ್ಟದ ಅಶ್ವಿನ್ ಹೆಲ್ತ್‌ಕೇರ್ ಅತ್ಯಾಧುನಿಕ ಸೂಪರ್ ಸ್ಪಾಷಾಲಿಟಿ ಮತ್ತು ಅಪೊಲೋ ಡಯಾಲಿಸಿಸ್ ಕ್ಲಿನಿಕ್ ನೂತನವಾಗಿ ಆರಂಭವಾಗಿದ್ದು, ಗುಣಮಟ್ಟದ ಆರೋಗ್ಯ ಸೇವೆಯು ಜಿಲ್ಲೆಯ ಜನರಿಗೆ ಲಭ್ಯವಾಗಲಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಭ್ರಮರಾಂಬ ಬಡಾವಣೆಯಲ್ಲಿ ನೂತನವಾಗಿ ಆರಂಭವಾದ ಅಶ್ವಿನ್ ಹೆಲ್ತ್‌ಕೇರ್ ಅತ್ಯಾಧುನಿಕ ಸೂಪರ್ ಸ್ಪಾಷಾಲಿಟಿ ಮತ್ತು ಅಪೊಲೋ ಡಯಾಲಿಸಿಸ್ ಕ್ಲಿನಿಕ್‌ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಾಮರಾಜನಗರ ಜಿಲ್ಲೆಯ ಜನರು ಈ ಹಿಂದೆ ಅತ್ಯಾಧುನಿಕ ಅಧುನಿಕ ತಂತ್ರಾಜ್ಞಾನವುಳ್ಳ ಉತ್ತಮ ಆರೋಗ್ಯ ಸೇವೆ ಪಡೆಯಲು ಮೈಸೂರಿಗೆ ಹೋಗುವಂತಹ ಪರಿಸ್ಥಿತಿ ಈ ಹಿಂದೆ ನಿರ್ಮಾಣವಾಗಿತ್ತು. ಅದನ್ನು ತಪ್ಪಿಸಲು ಸರ್ಕಾರವು ಸರ್ಕಾರಿ ಮೆಡಿಕಲ್ ಕಾಲೇಜು ಆರಂಭ ಮಾಡಿದೆ. ಇದರೊಟ್ಟಿಗೆ ಖಾಸಗಿ ಅಸ್ಪತ್ರೆಗಳು ಸಹ ಒಗ್ಗೂಡಿ ಜಿಲ್ಲೆಯ ಜನರಿಗೆ ಉತ್ತಮ ಆರೋಗ್ಯ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.
ಡಾ. ರಮೇಶ್ ಉಡುಪ ಹಾಗೂ ಡಾ. ಶಶಿಕಲಾ ರಮೇಶ್ ಉಡುಪ ದಂಪತಿಗಳು ಹಲವಾರು ದಶಕಗಳಿಂದ ಜಿಲ್ಲೆಯ ಯಳಂದೂರಿನಲ್ಲಿ ಉತ್ತಮ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಈಗ ಅವರು ಜಿಲ್ಲೆಯ ಜನರಿಗೆ ಇನ್ನು ಉತ್ತಮ ಸೇವೆ ನೀಡಲು ಜಿಲ್ಲಾ ಕೇಂದ್ರದಲ್ಲಿ ಅತ್ಯಧುನಿಕ ಸೌಲಭ್ಯವುಳ್ಳ ಸೂಪರ್ ಸ್ಪೆಷಾಲಿಟಿ ಹೆಲ್ತ್‌ಕೆರ್ ಸೌಲಭ್ಯ ಹಾಘೂ ಡಯಾಲಿಯಸ್ ಚಿಕಿತ್ಸಾಲಯ ಅಸ್ಪತ್ರೆಯನ್ನು ನಿರ್ಮಾಣ ಮಾಡಿದ್ದಾರೆ. ಆರು ಯೂನಿಟ್ ಡಯಾಲಿಸಿಸ್ ಘಟಕವನ್ನು ಆರಂಭಿಸಿದ್ದು, ಉತ್ತಮ ಸೇವೆಯನ್ನು ನೀಡುವ ಜೊತೆಗೆ ಜಿಲ್ಲೆಯ ಅಭಿವೃದ್ದಿಗೆ ತಮ್ಮದೇ ಆದ ಸೇವೆಯನ್ನು ಅಶ್ವಿನಿ ಹೆಲ್ತ್‌ಕೇರ್ ನೀಡಲಿದೆ ಎಂದರು.
ಅಶ್ವಿನ್ ಹೆಲ್ತ್ ಕೇರ್‌ನ ಮುಖ್ಯಸ್ಥರಾದ ಯಳಂದೂರಿನ ಡಾ. ರಮೇಶ್ ಉಡುಪ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಅತ್ಯಾಧುನಿಕ ಸೂಪರ್ ಸ್ಪೆಷಲಿಟಿ ಹೆಲ್ತ್‌ಕೇರ್ ಸೌಲಭ್ಯ ಮತ್ತು ಡಯಲಿಸಿಸ್ ಚಿಕಿತ್ಸಾಲಯಗಳನ್ನು ಆರಂಭಿಸಲಾಗಿದೆ. ಅಸ್ಪತ್ರೆಯಲ್ಲಿ ತಜ್ಞ ನುರಿತ ವೈದ್ಯರ ತಂಡ ಕಾರ್ಯನಿರ್ವಹಿಸಲಿದ್ದು, ಕಿಡ್ನಿಕೇರ್, ಮತ್ತು ಡಯಾಲಿಸಿಸ್, ಚರ್ಮ ಸೌಂದರ್ಯವರ್ಧಕ ಸೇವೆಗಳು, ಕಿಡ್ನಿ ರೋಗ, ಚರ್ಮರೋಗ, ಮೂತ್ರಪಿಂಡ ರೋಗ, ಹೃದಯ ರೋಗ, ಅಂಕೊಲಾಜಿ ಸೇರಿದಂತೆ ಇತರ ವಿಶೇಷ ಚಿಕಿತ್ಸೆಗಳು ದೊರೆಯಲಿವೆ. ಇದನ್ನು ಜಿಲ್ಲೆಯ ಜನತೆ ಸದುಪಯೋಗಪಡಿಸಿಕೊಳ್ಳಬೇಕು ಎಂದ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಡಾ. ಶಶಿಕಲಾ ರಮೇಶ್, ಡಾ. ಕಾರ್ತಿಕ್ ಉಡುಪ, ಡಾ. ಮೇಘಾ ಕಾರ್ತಿಕ್, ಪ್ರಕಾಶ್ ಎಂ.ಎಸ್. ಭವಾನಿ ಪ್ರಕಾಶ್, ರಾಜರಾಮ್ ಎಚ್.ಎಂ. ನಗರಸಭಾ ಮಾಜಿ ಸದಸ್ಯೆ ಶಾಂತಲಾ ನಾಗೇಂದ್ರ ಸೇರಿದಂತೆ ಇತರರು ಇತರರು ಹಾಜರಿದ್ದರು.