ಮೈಸೂರು : ಜಿಲ್ಲೆಯ ಹುಣಸೂರು ನಗರದ ನಿಜಾಂ ಮೊಹಲ್ಲಾದ ನಿವಾಸಿ ಖಾಜಾಪೀರ್(44) ಕೊಲೆಯಾದ ವ್ಯಕ್ತಿ ಖಾಜಾಪೀರ್ ಸ್ನೇಹಿತ ನಗರದ ಮುಸ್ಲಿಂಬ್ಲಾಕ್‌ನ ಜಾವಿದ್ ಹಾಗೂ ಇನಾಯತುಲ್ಲಾ ಬಂಧಿತ ಕೊಲೆ ಆರೋಪಿಗಳು.
ಆಟೋ ಚಾಲಕ ಹಾಗೂ ಲೋಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಖಾಜಾಪೀರ್, ಜಾವಿದ್ ಹಾಗೂ ಇನಾಯತುಲ್ಲಾರವರು ಸ್ನೇಹಿತರಾಗಿದ್ರುಕೊಲೆ ಆರೋಪಿ ಜಾವಿದ್ ನಗರದ ವ್ಯಕ್ತಿಯೊಬ್ಬರಿಂದ 15 ಸಾವಿರ ಸಾಲ ಪಡೆದಿದ್ದ.
ಸಾಲ ಮರುಪಾವತಿ ಮಾಡದ ಕಾರಣ ಜಾವಿದ್‌ನ ಬೈಕನ್ನು ವಶಕ್ಕೆ ಪಡೆದಿದ್ದ, ಬೈಕ್ ಕಿತ್ತುಕೊಳ್ಳಲು ಕೊಲೆಯಾದ ಖಾಜಾಪೀರ್ ಕಾರಣವಾಗಿದ್ದಾನೆಂದು ಗುರುವಾರ ಮದ್ಯ ರಾತ್ರಿ ಮಂಟಿ ಸರ್ಕಲ್ ಬಳಿಯಲ್ಲಿ ಮೂವರ ನಡುವೆ ಜಗಳವಾಗಿದೆ.ಕುಡಿದ ಮತ್ತಿನಲ್ಲಿ ಮರದ ರಿಪೀಸ್ ಪಟ್ಟಿಯಲ್ಲಿ ಹೊಡೆದಾಟವಾಗಿದೆ, ತೀವ್ರ ಪೆಟ್ಟು ಬಿದ್ದಕಾರಣ ಖಾಜಾಪೀರ್ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಈ ಸಂಬಂಧ ಹುಣಸೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



