ಹುಣಸೂರು: ಮನುಷ್ಯನಿಗೆ ಅಸಾಧ್ಯವಾದದ್ದು ಯಾವುದು ಇಲ್ಲ ಮದ್ಯ ವ್ಯಸನಿಗಳಾಗಿರುವ ಶಿಬಿರಾರ್ಥಿಗಳು ದೃಢಸಂಕಲ್ಪ ಮಾಡಿ ಕುಡಿತದಿಂದ ದೂರವಿದ್ದು ಇಂದಿನಿಂದ ಹೊಸ ಜೀವನ ಪ್ರಾರಂಭಿಸಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಿರೆಂದು ಶಾಸಕ ಜಿ.ಡಿ ಹರೀಶ್‌ಗೌಡ ಹೇಳಿದರು.
ಗಾವಡಗೆರೆ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ, ಅಖಿಲ ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಮದ್ಯ ವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಹಾಗೂ ಪ್ರಗತಿಬಂಧು ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ೧೭೪೭ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಮೊದಲಿಗೆ ಮೋಜಿಗಾಗಿ ಕುಡಿತ ಪ್ರಾರಂಬಿಸಿ ನಂತರ ಚಟವಾಗಿ ನಿಮ್ಮ ಆರೋಗ್ಯ ಹಾಳಾಗುವುದರ ಜತೆಗೆ ನಿಮ್ಮ ಕುಟುಂಬ ಸಂಕಷ್ಟಕ್ಕೊಳಾಗುತ್ತದೆ. ಇದಲ್ಲದೆ ಸಮಾಜದಲ್ಲಿ ಮದ್ಯ ವ್ಯಸನಿಗಳನ್ನು ಕೆಟ್ಟ ದೃಷ್ಟಿಯಲ್ಲಿ ನೋಡುತ್ತಿರುವ ಪರಿಸ್ಥಿತಿಯನ್ನು ಧರ್ಮಸ್ಥಳದ ಧರ್ಮಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆಯವರು ತಮ್ಮ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃಧ್ದಿ ಯೋಜನೆಯ ಮೂಲಕ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸುತ್ತಿದ್ದಾರೆ.
ಈಗ ಗಾವಡಗೆರೆ ಶಿಬಿರದಲ್ಲಿ ೬೯ ಮಂದಿ ಮದ್ಯ ವ್ಯಸನಿಗಳ ಕುಡಿತ ಬಿಡಿಸಲು ಇಂದು ನೂರಾರು ಮಂದಿ ಕೆಲಸ ಮಾಡಿದ್ದಾರೆ. ಆದರಿಂದ ಶಿಬಿರಾರ್ಥಿ ಗಳು ಮುಂದಿನ ದಿನಗಳಲ್ಲಿ ನಡೆಯುವ ಶಿಬಿರದಲ್ಲಿ ಇಂತಹ ವೇದಿಕೆ ಮೇಲೆ ನೀವೇ ಅತಿಥಿಗಳಾಗಿ ಭಾಗವಹಿಸಿ ಇನ್ನೊಬ್ಬರಿಗೆ ಮಾದರಿ ಯಾಗಬೇಕೆಂದರು. ಗಾವಡಗೆರೆ ಗುರುಲಿಂಗ ಜಂಗಮ ದೇವರ ಮಠದ ನಟರಾಜ ಸ್ವಾಮೀಜಿ ಮಾತನಾಡಿ ಸರ್ಕಾರ ಮಾಡದ ಕೆಲಸವನ್ನು ಸಂಘ-ಸಂಸ್ಥೆಗಳು ಹಾಗೂ ಸ್ವಾಮೀಜಿಗಳು ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು,ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃಧ್ದಿ ಯೋಜನೆವತಿಯಿಂದ ಆಯೋಜಿಸುವ ಮದ್ಯ ವರ್ಜನ ಶಿಬಿರದಿಂದ ಸಾವಿರಾರು ಮಂದಿ ಮದ್ಯದ ಅಮಲಿನಿಂದ ಹೊರ ಬಂದು ನೆಮ್ಮದಿ ಬದುಕು ಸಾಗಿಸುತ್ತಿದ್ದಾರೆಂದರು.
ಜಿಲ್ಲಾ ಜನಜಾಗೃತಿ ಸಮಿತಿ ಅಧ್ಯಕ್ಷ ಹಂದನಹಳ್ಳಿ ಸೋಮಶೇಖರ್, ಸಮಿತಿ ಅಧ್ಯಕ್ಷ ಕಾಳಿಂಗರಾವ್ ಘಾಟ್ಕೆ, ಯೋಜನೆಯ ಜಿಲ್ಲಾ ನಿರ್ದೇಶಕ ಮುರುಳಿಧರ್ ತಾಲೂಕು ಯೋಜನಾಧಿಕಾರಿ ನಾರಾಯಣಶೆಟ್ಟಿ, ಅನ್ನಪೂರ್ಣಬಾಯಿ, ಗಣಪತಿರಾವ್ ಇಂಡಲ್ಕರ್, ಮೇಲ್ವಿಚಾರಕರಾದ ಶಿವಕುಮಾರ್, ಸುನಂದ ಶಿಬಿರಾಧಿಕಾರಿ ದೇವಿಪ್ರಸಾದ್, ಆರೋಗ್ಯ ಸಹಾಯಕಿ ಪ್ರಸಿಲ್ಲಾ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.