Saturday, April 19, 2025
Google search engine

HomeUncategorizedರಾಷ್ಟ್ರೀಯಕ್ವಿಟ್ ಇಂಡಿಯಾ ದಿನ: ಮಹಾತ್ಮಾ ಗಾಂಧಿ ಮರಿ ಮೊಮ್ಮಗ ತುಷಾರ್ ಗಾಂಧಿ ಬಂಧನ

ಕ್ವಿಟ್ ಇಂಡಿಯಾ ದಿನ: ಮಹಾತ್ಮಾ ಗಾಂಧಿ ಮರಿ ಮೊಮ್ಮಗ ತುಷಾರ್ ಗಾಂಧಿ ಬಂಧನ

ಮುಂಬೈ: ಮಹಾತ್ಮಾ ಗಾಂಧಿಯವರ ಮರಿ ಮೊಮ್ಮಗ ತುಷಾರ್ ಅವರು ಕ್ವಿಟ್ ಇಂಡಿಯಾ ದಿನದ ಸ್ಮರಣಾರ್ಥವಾಗಿ ಕ್ರಾಂತಿ ಮೈದಾನಕ್ಕೆ ತೆರಳುತ್ತಿದ್ದಾಗ ಮುಂಬೈನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ತುಷಾರ್ ಗಾಂಧಿ ಅವರು ಟ್ವಿಟರ್​​ ನಲ್ಲಿ ಹಂಚಿಕೊಂಡಿದ್ದು,​​”ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ, ನಾನು ಆಗಸ್ಟ್ 9ರಂದು ನಡೆದ ಕ್ವಿಟ್ ಇಂಡಿಯಾ ದಿನದ ನೆನಪಿಗಾಗಿ ಕ್ರಾಂತಿ ಮೈದಾನ ಮನೆಯಿಂದ ಹೊರಟಾಗ ಸಾಂತಾಕ್ರೂಜ್ ಪೊಲೀಸ್ ಬಂಧಿಸಿದ್ದಾರೆ. ಈ ದಿನದಂದೇ ನನ್ನನ್ನೂ ಬಂಧಿಸಿರುವುದು ನನಗೆ ಹೆಮ್ಮೆ ಇದೆ ಎಂದು ಟ್ವೀಟ್​​ ಮಾಡಿದ್ದಾರೆ.

ಪೊಲೀಸರ ವರದಿ ಪ್ರಕಾರ ಕ್ರಾಂತಿ ಮೈದಾನದಲ್ಲಿ ಮೌನ ಮೆರವಣಿಗೆ ಮಾಡಲು ಅವಕಾಶ ಇಲ್ಲ, ಆದರೆ ಈ ಯೋಜನೆಯನ್ನು ಅವರು ಹಾಕಿಕೊಂಡಿದ್ದಾರೆ. ಇದು ‘ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘನೆ ಎಂದು ಹೇಳಿದ್ದಾರೆ.

ಇನ್ನು ತುಷಾರ್ ಗಾಂಧಿ, ಒಂದು ವೇಳೆ ನನಗೆ ಠಾಣೆಯಿಂದ ಬಿಡುಗಡೆ ನೀಡಿದರೆ ನಾನು ಖಂಡಿತ ಕ್ರಾಂತಿ ಮೈದಾನಕ್ಕೆ ಹೋಗುತ್ತೇನೆ. ಈ ದಿನವನ್ನು ಸ್ಮರಿಸುವೆ ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular