ಹುಣಸೂರು: ಶಿಸ್ತಿಗೆ ಮತ್ತೊಂದು ಹೆಸರಾಗಿ ರೊ.ದಿ.ಅನಂತರಾಜೇಅರಸ್ ತಮ್ಮ ಜೀವಿತ ಅವಧಿಯಲ್ಲಿ ನಡೆದುಕೊಂಡಿದ್ದರು ಎಂದು ಸಹಾಯಕ ಗವರ್ನರ್ ಆನಂದ್ ಆರ್ ತಿಳಿಸಿದರು.
ನಗರದ ರೋಟರಿ ಭವನದಲ್ಲಿ ಇತ್ತೀಚಿಗೆ ನಿಧನರಾದ ರೊ.ಅನಂತರಾಜೇಅರಸ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ, ಮಾತನಾಡಿದ ಅವರು, ಹಲವಾರು ವರುಷಗಳಿಂದ ಹುಣಸೂರು ರೋಟರಿ ಕ್ಲಬಿಗೆ ತಮ್ಮದೇ ಸೇವೆ ಸಲ್ಲಿಸಿ ಶ್ರಮಿಸಿದ್ದಾರೆ ಎಂದರು.
ನಂತರ ಹಿರಿಯ ರೊ. ರಾಜಶೇಖರ್ ಮಾತನಾಡಿ, ನಮ್ಮಲ್ಲಿ ಅಧ್ಯಕ್ಷ ಮತ್ತು ಹಲವು ಉದ್ದೆಗಳನ್ನು ಪಡೆದು ಅವರ ಅವಧಿಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ್ದ, ಅವರ ಸೇವೆ ಅನನ್ಯವಾದದ್ದು ಎಂದು ಸ್ಮರಿಸಿದರು.
ರೋಟರಿ ಅಧ್ಯಕ್ಷ ಡಾ.ಪ್ರಸನ್ನ ಕೆ.ಪಿ . ಮಾತನಾಡಿ, ಅವರ ಕಾರ್ಯ ವೈಖರಿಯಿಂದ ರೋಟರಿ ಬದಲಾವಣೆ . ಎಲ್ಲರಿಗೂ ಮಾದರಿಯಾದ ಕ್ರಮವಹಿಸಿದ್ದು, ಸಮಾಜಕ್ಕೆ ಒಳಿತನ್ನು ಬಯಸ್ಸುವ ಮೂಲಕ ಬೇರೆಯವರಿಗೆ ಮಾದರಿಯಾಗಿರುವುದಕ್ಕೆ ಅವರ ನೆನಪು ಚಿರವಾಗಿರಲಿ ಎಂದರು.
ಕಾರ್ಯಕ್ರಮದಲ್ಲಿ ರೋ. ಕಾರ್ಯದರ್ಶಿ ಹೆಚ್.ಆರ್.ಕೃಷ್ಣಕುಮಾರ್, ರೊ. ಡಾ. ಬಸವರಾಜ್, ರೊ. ವಲಯ ಸೆನಾನಿ ಪಾಂಡುಕುಮಾರ್, ರೊ.ಸಂತೋಷ್ ಕುಮಾರ್, ರೋಟರಿ ಮೇಲ್ಚಾರಕ ಶ್ರೀನಿವಾಸ್ ಇದ್ದರು.