Monday, April 14, 2025
Google search engine

Homeರಾಜಕೀಯಅಧಿಕಾರ ಪಡೆಯಲು ಹಿಂದುಳಿದ, ಒಬಿಸಿ ವರ್ಗಗಳ ಬೆಂಬಲ ಪಡೆಯಲು ರಾಹುಲ್‌ ಗಾಂಧಿ ಕರೆ

ಅಧಿಕಾರ ಪಡೆಯಲು ಹಿಂದುಳಿದ, ಒಬಿಸಿ ವರ್ಗಗಳ ಬೆಂಬಲ ಪಡೆಯಲು ರಾಹುಲ್‌ ಗಾಂಧಿ ಕರೆ

ಅಹಮದಾಬಾದ್: ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್‌ ಪಕ್ಷವು ಮತ್ತೆ ಅಧಿಕಾರ ಪಡೆಯಲು ಹಿಂದುಳಿದ ವರ್ಗ (ಒಬಿಸಿ) ಮತ್ತು ಮಹಿಳೆಯರ ಬೆಂಬಲವನ್ನು ಮರಳಿ ಗಳಿಸುವಂತೆ ಪಕ್ಷದ ನಾಯಕರಿಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕರೆ ನೀಡಿದ್ದಾರೆ.

ಅಹಮದಾಬಾದ್ ನಲ್ಲಿ ನಡೆದ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷವು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಬೆಂಬಲವನ್ನು ಹೊಂದಿದೆ. ಆದರೆ ಬಡ ವರ್ಗಗಳು ಸೇರಿದಂತೆ ಜನಸಂಖ್ಯೆಯ ಸುಮಾರು ಶೇ.  50ರಷ್ಟಿರುವ ಇತರೆ ಹಿಂದುಳಿದ ವರ್ಗಗಳ ವಿಶ್ವಾಸವನ್ನು ಮರಳಿ ಗಳಿಸುವುದು ಮುಖ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಷಯದಲ್ಲಿ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಸಾಮರ್ಥ್ಯ ಕಾಂಗ್ರೆಸ್‌ಗೆ ಇದೆ. ಜನಸಂಖ್ಯೆಯ ಸುಮಾರು ಅರ್ಧದಷ್ಟಿರುವ ಮಹಿಳಾ ಮತದಾರರ ಬೆಂಬಲವನ್ನು ಮರಳಿ ಗಳಿಸಲು ಗಮನಹರಿಸಬೇಕು ಎಂದು ರಾಹುಲ್‌ ಗಾಂಧಿ ಪಕ್ಷದ ನಾಯಕರಿಗೆ ಒತ್ತಿ ಹೇಳಿದ್ದಾರೆ. ಎಸ್‌ ಸಿ, ಎಸ್‌ಟಿ ಮತ್ತು ಒಬಿಸಿ ವರ್ಗಗಳಿಗೆ ಮೀಸಲಾತಿಯ ಮೇಲಿನ ಶೇ. 50 ರಷ್ಟು ಮಿತಿಯನ್ನು ಹೆಚ್ಚಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಸಮಾಜದಲ್ಲಿ ಎಲ್ಲರಿಗೂ ಸಮಾನ ನ್ಯಾಯ ಒದಗಿಸಲು ದೇಶದಾದ್ಯಂತ ಜಾತಿ ಜನಗಣತಿ ನಡೆಸಬೇಕೆಂದು ಅಧಿವೇಶನದಲ್ಲಿ ಕಾಂಗ್ರೆಸ್‌ ಒತ್ತಾಯಿಸಿದೆ.

RELATED ARTICLES
- Advertisment -
Google search engine

Most Popular