Friday, April 18, 2025
Google search engine

Homeರಾಜಕೀಯರಾಹುಲ್ ಗಾಂಧಿ ಪಾದಯಾತ್ರೆ ಸಹಿಸದೆ ತೊಂದರೆ ನೀಡುತ್ತಿರುವುದು ಸಂವಿಧಾನದ ವಿರುದ್ಧ-ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಹುಲ್ ಗಾಂಧಿ ಪಾದಯಾತ್ರೆ ಸಹಿಸದೆ ತೊಂದರೆ ನೀಡುತ್ತಿರುವುದು ಸಂವಿಧಾನದ ವಿರುದ್ಧ-ಮುಖ್ಯಮಂತ್ರಿ ಸಿದ್ದರಾಮಯ್ಯ

ಪಿರಿಯಾಪಟ್ಟಣ: ಕೇಂದ್ರ ಸರ್ಕಾರದ ದುರಾಡಳಿತದ ವಿರುದ್ಧ ರಾಹುಲ್ ಗಾಂಧಿ ಅವರು ಮಾಡುತ್ತಿರುವ ಯಾತ್ರೆಯನ್ನು ಸಹಿಸದೆ ತೊಂದರೆ ನೀಡುತ್ತಿರುವುದು ಸಂವಿಧಾನದ ವಿರುದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಪಿರಿಯಾಪಟ್ಟಣ ತಾಲೂಕಿನ ಮುತ್ತಿನ ಮುಳುಸೋಗೆ ಗ್ರಾಮದಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೈಲಕುಪ್ಪೆ ಟಿಬೇಟಿಯನ್ ಕ್ಯಾಂಪ್ ಬಳಿಯ ಹೆಲಿಪ್ಯಾಡ್ ಗೆ ಆಗಮಿಸಿದ ಸಂದರ್ಭ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿ ಅವರು ಮಾತನಾಡಿದರು, ದೇಶದ ಸಮಸ್ಯೆಗಳನ್ನು ತಿಳಿದು ಅವುಗಳಿಗೆ ಪರಿಹಾರ ಕಂಡುಕೊಳ್ಳಲು ರಾಹುಲ್ ಗಾಂಧಿ ಪಾದಯಾತ್ರೆ ಮಾಡುತ್ತಿದ್ದು ಅದಕ್ಕೆ ಅಗತ್ಯ ಭದ್ರತೆ ನೀಡಬೇಕಿರುವುದು ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಕರ್ತವ್ಯ ಆದರೆ ಪಾದಯಾತ್ರೆಯನ್ನು ಹತ್ತಿಕ್ಕುವುದು ಸರಿಯಲ್ಲ, ನೆಹರು ಕುಟುಂಬಕ್ಕೆ ಬೆದರಿಕೆಯಿದೆ ಉದ್ದೇಶ ಪೂರ್ವಕವಾಗಿ ಭದ್ರತಾ ಲೋಪ ಮಾಡುತ್ತಿರುವುದು ಸರಿಯಲ್ಲ,ಕೇಂದ್ರ ಸರ್ಕಾರದ ವಿರುದ್ಧ ಮಾಡುವ ಪ್ರತಿಭಟನೆ ಪಾದಯಾತ್ರೆಗಳನ್ನು ಬಿಜೆಪಿ ಸಹಿಸುತ್ತಿಲ್ಲ.

ಅಸ್ಸಾಂ ಮುಖ್ಯಮಂತ್ರಿ ಪಾದಯಾತ್ರೆ ತಡೆಯಲು ಪ್ರಚೋದನೆ ನೀಡಿ ಅಮಿತ್ ಷಾ ಮೋದಿ ಮೆಚ್ಚಿಸಲು ಮುಂದಾಗಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ, ಕೇಂದ್ರ ಸರ್ಕಾರ ಇದುವರೆಗೂ ಬರ ಪರಿಹಾರ ಕೊಡದ ಕಾರಣ ರಾಜ್ಯ ಸರ್ಕಾರ ವತಿಯಿಂದ ಈಗಾಗಲೇ ಹಣ ಬಿಡುಗಡೆ ಮಾಡಿದ್ದೇವೆ, ಪ್ರಧಾನಿ ಬೆಂಗಳೂರಿಗೆ ಬಂದಾಗಲೂ ಬರ ಪರಿಹಾರ ನೀಡುವಂತೆ ಕೇಳಿದ್ದೆ ಆದರೂ ನಿರ್ಲಕ್ಷತನ ತೋರುತ್ತಿದ್ದಾರೆ ಎಂದರು.

ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಾತನಾಡಿ ಬಿಜೆಪಿ ಜೆಡಿಎಸ್‌ನಲ್ಲಿ ನಾಯಕತ್ವದ ಕೊರತೆ ಕಾರಣ ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್ ಸೇರಿಸಿಕೊಳ್ಳಲು ಸಂಪರ್ಕಿಸುತ್ತಿದ್ದಾರೆ ಈ ವಿಚಾರವಾಗಿ ಅವರೇ ಸ್ಪಷ್ಟನೆ ನೀಡಿ ನಾನು ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ ಎಂದಿದ್ದಾರೆ,
ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ ನಿಮ್ಮಲ್ಲಿ ಲೀಡರ್‌ಗಳು ಇಲ್ವವಾ, ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಕಣ್ಣೀರು ಹಾಕಿಸಿದವರು ಯಾರು, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದಿದ್ದು ಯಾರು, ಇದೆಲ್ಲವನ್ನೂ ರಾಜ್ಯ ರಾಜಕಾರಣ ನೋಡಿದೆ ಆದರೆ ಈಗ ಅವರಿಬ್ಬರೂ ತಬ್ಬಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಈ ಸಂದರ್ಭ ಸಚಿವರಾದ ಕೆ.ವೆಂಕಟೇಶ್, ಎಚ್.ಸಿ ಮಹದೇವಪ್ಪ ಇದ್ದರು.

RELATED ARTICLES
- Advertisment -
Google search engine

Most Popular