Friday, April 11, 2025
Google search engine

Homeರಾಜ್ಯನ್ಯಾಯಯುತ ವ್ಯಾಪಾರಕ್ಕಿಂತ ರಾಜಕೀಯ ಲಾಭದ ವ್ಯವಹಾರಗಳಿಗೆ ಆದ್ಯತೆ: ರಾಹುಲ್ ಗಾಂಧಿ ಕಿಡಿ

ನ್ಯಾಯಯುತ ವ್ಯಾಪಾರಕ್ಕಿಂತ ರಾಜಕೀಯ ಲಾಭದ ವ್ಯವಹಾರಗಳಿಗೆ ಆದ್ಯತೆ: ರಾಹುಲ್ ಗಾಂಧಿ ಕಿಡಿ

ನವದೆಹಲಿ: ನ್ಯಾಯಯುತ ವ್ಯಾಪಾರಕ್ಕಿಂತ ರಾಜಕೀಯ ಲಾಭದಿಂದ ಕೂಡಿರುವ ವ್ಯವಹಾರಗಳಿಗೆ ಆದ್ಯತೆ ನೀಡುತ್ತಿರುವುದರಿಂದ ಉತ್ಪಾದನಾ ವಲಯದಲ್ಲಿ ಕುಸಿತ, ಹಣ ದುಬ್ಬರ ಸೇರಿದಂತೆ ದೇಶದ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಮೋದಿ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ವ್ಯಾಪಾರದಲ್ಲಿ ಕೊರತೆ ಹಾಗೂ ಆಮದುಗಳ ಸಾರ್ವ ಕಾಲಿಕ ಗರಿಷ್ಠ ಮಟ್ಟ ತಲುಪಿವೆ ಎಂದು ಹೇಳಿದರು.ಸರ್ಕಾರಗಳು ನ್ಯಾಯಯುತ ವ್ಯಾಪಾರಕ್ಕಿಂತ ರಾಜಕೀ ಯ ಲಾಭದಿಂದ ಕೂಡಿರುವ ವ್ಯವಹಾರಗಳಿಗೆ ಆದ್ಯತೆ ನೀಡುತ್ತಿರುವುದರಿಂದ ದೇಶದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಿದೆ. ದುರ್ಬಲಗೊಂಡ ಉತ್ಪಾದನಾ ವಲಯ, ಹಣ ದುಬ್ಬರ, ವ್ಯಾಪಾರದ ಕೊರತೆ, ಬಡ್ಡಿದರಗಳ ಸೇ ರಿದಂತೆ ಆಮದುಗಳಲ್ಲಿ ಏರಿಕೆ ಕಂಡಿದೆ ಎಂದು ರಾಹುಲ್ ವಾಗ್ದಾಳಿ ನಡೆಸಿದರು.

‘ಭಾರತದ ರಫ್ತುಗಳು ವರ್ಷದಿಂದ ವರ್ಷಕ್ಕೆ ಕುಂಠಿತಗೊಳ್ಳುತ್ತಿದೆ. ಆದರೆ ಆಮದುಗಳಲ್ಲಿ ದಾಖಲೆಯ ಮಟ್ಟದಲ್ಲಿ ಏರಿಕೆ ಕಂಡಿದೆ. ವಾಣಿಜ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ತರಕಾರಿ ತೈಲ, ರಸಗೊಬ್ಬರ ಮತ್ತು ಬೆಳ್ಳಿಗಳ ಆಮದುಗಳು ವರ್ಷದಿಂದ ವರ್ಷ ಕ್ಕೆ ಶೇ . 27ರಷ್ಟು ಏರಿಕೆಯಾಗಿ ದಾಖಲೆಯ ಮಟ್ಟ ತಲುಪಿದೆ ಎಂದು ರಾಹುಲ್ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular