ಘಾಜಿಯಾಬಾದ್: ಮಸೀದಿ ಸರ್ವೇ ವಿರೋಧಿಸಿ ಹಿಂಸಾಚಾರ ನಡೆದಿದ್ದ ಸಂಭಾಲ್‌ನಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರನ್ನು ಜಿಲ್ಲೆಗೆ ತೆರಳುವ ಮಾರ್ಗದಲ್ಲಿನ ಯುಪಿ ಗೇಟ್‌ನಲ್ಲಿ ಬುಧವಾರ(ಡಿ.4) ಪೊಲೀಸರು ತಡೆದು ನಿಲ್ಲಿಸಿದ್ದಾರೆ.
ಸಂಭಾಲ್‌ನಲ್ಲಿ ಸೆಕ್ಷನ್ 163 ಅಡಿಯಲ್ಲಿ ನಿರ್ಬಂಧಗಳನ್ನು ಡಿಸೆಂಬರ್ 31 ರವರೆಗೂ ವಿಸ್ತರಿಸಲಾಗಿದೆ. ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಿಯೋಗ ಸಂಭಾಲ್‌ಗೆ ಭೇಟಿ ನೀಡಲು ಮುಂದಾಗಿದ್ದು, ಅವರೊಂದಿಗೆ ಪ್ರಮುಖ ನಾಯಕರು, ಉತ್ತರ ಪ್ರದೇಶದ ಐವರು ಕಾಂಗ್ರೆಸ್ ಸಂಸದರೂ ಇದ್ದರು.ಸ್ಥ ಳದಲ್ಲಿ ಭಾರಿ ಸಂಖ್ಯೆಯ ಪೊಲೀಸರನ್ನು ನಿಯೋಜಿಸಿ ರಾಹುಲ್ ಗಾಂಧಿ ನೇತೃತ್ವದ ನಿಯೋಗವನ್ನು ತಡೆಯಲಾಗಿದೆ.
“ಆಡಳಿತವು ನಿಷೇಧಾಜ್ಞೆಗಳನ್ನು ಹೊರಡಿಸಿರುವ ಕಾರಣ ನಾವು ರಾಹುಲ್ ಗಾಂಧಿಯವನ್ನು ಸಂಭಾಲ್‌ಗೆ ತೆರಳಲು ಅನುಮತಿ ನೀಡುವುದಿಲ್ಲ ಎಂದು ಗಾಜಿಯಾಬಾದ್ ಪೊಲೀಸ್ ಕಮಿಷನರ್ ಅಜಯ್ ಕುಮಾರ್ ಮಿಶ್ರಾ ಪಿಟಿಐಗೆ ಹೇಳಿಕೆ ನೀಡಿದ್ದಾರೆ.