ರಾಯಚೂರು: ನಗರದ ಲಿಂಗಸೂಗೂರು ರಸ್ತೆಯಲ್ಲಿರುವ ಕೃಷ್ಣಾ ಮೆಡ್ ಹೌಸ್ ನಿನ್ನೆ ರಾತ್ರಿ ಮನೆಯೊಂದರಲ್ಲಿ ಕಳುವಿನ ಯತ್ನ ನಡೆಯಿತು. ಮಧ್ಯರಾತ್ರಿ ಒಂದಕ್ಕೆ ಈ ಘಟನೆ ನಡೆದಿದೆ. ನಾಲ್ವರು ಚಡ್ಡಿ ದಾರಿಗಳು ಕಳುವಿನ ಪ್ರಕರಣದಲ್ಲಿ ಭಾಗಿಯಾಗಿದ್ದರು. ಮನೆ ಯಲ್ಲಿ ಯಾರೂ ಇಲ್ಲದೆ ಇರುವುದ ಮಾಹಿತಿ ಪಡೆದ ಈ ಡಕಾಯಿತರು ಮಧ್ಯರಾತ್ರಿ ಮುಖಕ್ಕೆ ಮುಸುಕು ಧರಿಸಿ, ಮೇಲಂಗಿ ಇಲ್ಲದೆ ಕಳುವಿನ ಪ್ರಕರಣದಲ್ಲಿ ತೊಡಗಿದರು. ಮನೆಯ ಬಾಗಿಲು ಚೌಕಟ್ಟು ಮುರಿದು, ಒಳಗೆ ಪ್ರವೇಶಿಸಿ ಕಳುವಿನ ಯತ್ನ ನಡೆಸಿದರು. ಸರಿಯಾದ ಸಮಯಕ್ಕೆ ವಾಚ್ ಮ್ಯಾನ್ ಅಲ್ಲಿ ಬಂದ ಹಿನ್ನೆಲೆಯಲ್ಲಿ ಡಕಾಯಿತರ ಗುಂಪು ಕಬ್ಬಿಣದ ಸರಳು, ಚಪ್ಪಲಿ ಬಿಟ್ಟು ಪರಾರಿಯಾಗಿದ್ದಾರೆ. ಹಿಂದೆ ನಗರದಲ್ಲಿ ಚಡ್ಡಿ ಗ್ಯಾಂಗ್ ಸರಣಿ ಕಳುವಿನ ಪ್ರಕರಣದಲ್ಲಿ ಭಾಗಿಯಾಗಿದ್ದರು. ಈ ನಾಲ್ವರು ಚಡ್ಡಿಯನ್ನು ಧರಿಸಿರುವುದನ್ನು ಗಮನಿಸಿದರೆ, ಈ ಗ್ಯಾಂಗ್ ಇನ್ನು ನಗರದಲ್ಲಿ ಅಪರಾಧ ಪ್ರಕರಣಗಳಲ್ಲಿ ತೊಡಗಿದೆಯೇ? ಎನ್ನುವ ಅನುಮಾನ ಮೂಡುವಂತೆ ಮಾಡಿದೆ. ಈ ಕುರಿತು ಮನೆಯ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಶ್ವಾನದಳ ಮತ್ತು ಬೆರಳಚ್ಚು ದಳಗಳು ಧಾವಿಸಿ ತಪಾಸಣೆ ನಡೆಸಿವೆ. ವೆಸ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳುವಿನ ಪ್ರಕರಣದಲ್ಲಿ ಭಾಗಿ ಯಾದವರ ಪತ್ತೆ ಕಾರ್ಯಕ್ಕಾಗಿ ತೀವ್ರ ಶೋಧ ನಡೆದಿದೆ.