ರಾಯಚೂರು: ತಾಲೂಕಿನ ರಾಂಪುರ ಮತ್ತು ಕುರುವಕಲ ಮಧ್ಯೆದ ಕೃಷ್ಣಾ ನದಿಯಲ್ಲಿ ಒಂದೇ ಕಡೆ ಸುಮಾರು 20ಕ್ಕೂ ಹೆಚ್ಚು ಮೊಸಳೆ ಕಂಡುಬಂದಿದ್ದು, ಮೀನುಗಾರರು ಮೀನು ಹಿಡಿಯಲು ಹೋದಾಗ ಈ ದೃಶ್ಯ ವನ್ನು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಅಲ್ಲದೆ ಇತ್ತೀಚೆಗೆ ನದಿ ಪಾತ್ರದ ಗ್ರಾಮಗಳಿಗೆ ಮೊಸಳೆ ಕಾಟ ಹೆಚ್ಚಾಗುತ್ತಿದ್ದು ಈಚೆಗೆ ರಾಂಪುರದಲ್ಲಿ ಬಾಲಕನ ಮೇಲೆ ದಾಳಿ ಹಾಗೂ ಆಕಳು ಮತ್ತು ಎಮ್ಮೆ ಕುರಿಗಳನ್ನು ಹೊತ್ತೋಯ್ದ ದೃಶ್ಯ ಕಣ್ಣಮುಂದಿರುವಾಗಲೇ ಈಗ ಮೊಸಳೆಗಳ ಹಿಂಡು ನೋಡಿ ಗ್ರಾಮಸ್ಥರು ಕಂಗಾಲಾಗಿದ್ದಾರೆ.