ರಾಯಚೂರು: ರಾಯಚೂರು ನಗರದಲ್ಲಿ ನಿರಂತರ ಜಿಟಿಜಿಟಿ ಮಳೆಯ ಪರಿಣಾಮ ಮನೆಯ ಗೋಡೆ ಕುಸಿತವಾಗಿದೆ.
ನಗರದ ಮಕ್ತಲಪೇಟೆಯಲ್ಲಿ ಸೋನಾಬಾಯಿ ಅವರಿಗೆ ಸೇರಿದ ಮನೆಯ ಗೋಡೆ ಇಂದು ಬೆಳಗಿನ ಜಾವ ಕುಸಿದು ಬಿದ್ದಿದೆ.
ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯ ಗೋಡೆ ಕುಸಿದು ಬಿದ್ದಿದ್ದು , ಯಾವುದೇ ಪ್ರಾಣಪಾಯವಾಗಿಲ್ಲ.
ಕಳೆದ ಒಂದು ವಾರಗಳಿಂದ ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಜಿಟಿ ಮಳೆ ಗೋಡೆ ಕುಸಿಯಲು ಕಾರಣವಾಗಿದೆ.