ರಾಯಚೂರು: ನಗರದ ರಿಮ್ಸ್ ಆಸ್ಪತ್ರೆಗೆ ಪ್ರತಿನಿತ್ಯ ನೂರಾರು ಜನ ಚಿಕಿತ್ಸೆಗೆಂದು ಬರುವ ರೋಗಿಗಳ ಮೇಲೆ ಕೋತಿಗಳು ದಾಳಿ ಮಾಡುವ ಆತಂಕ ಎದುರಾಗಿದೆ.
ರಿಮ್ಸ್ ಆಸ್ಪತ್ರೆಯಲ್ಲಿ ಮಂಗಗಳು ಆಸ್ಪತ್ರೆಯ ಒಳಗಡೆ ಪ್ರವೇಶ ಮಾಡುತ್ತಿದ್ದು, ಆಡಳಿತ ಮಂಡಳಿ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಪರಿಣಾಮ, ರೋಗಿಗೆ ತಂದಿಟ್ಟಿರುವ ಊಟ – ತಿಂಡಿ, ತಿನಿಸುಗಳು, ಹಣ್ಣುಗಳನ್ನು ತೆಗೆದುಕೊಂಡು ಹೋಗುತ್ತಿವೆ. ಕೆಲವೊಮ್ಮ ಕೋತಿಗಳನ್ನು ಓಡಿಸಲು ಹೋದ್ರೆ ರೋಗಿಗಳ ಮೇಲೆ ದಾಳಿ ಮಾಡುತ್ತಿವೆ.
ಕಪಿಚೇಷ್ಠೆಯಿಂದ ರೋಗಿಗಳು ರೋಸಿ ಹೋಗಿದ್ದಾರೆ, ಕೋತಿಗಳು ಮುಖ್ಯ ಧ್ವಾರದ ಮೂಲಕ ಒಳ ಪ್ರವೇಶಿಸುತ್ತಿದ್ದು, ಆಡಳಿತ ಮಂಡಳಿ ಕೂಡಲೇ ಕೋತಿಗಳ ಕಾಟದಿಂದ ರಕ್ಷಣೆ ನೀಡಬೇಕಾಗಿದೆ ಎಂದು ರೋಗಿಗಳು ಒತ್ತಾಯಿಸಿದ್ದಾರೆ.