Sunday, April 20, 2025
Google search engine

Homeಅಪರಾಧರಾಯಚೂರು: ಮಾಂಸದೂಟ ಸೇವಿಸಿ 20ಕ್ಕೂ ಹೆಚ್ಚು ಜನರು ಅಸ್ವಸ್ಥ

ರಾಯಚೂರು: ಮಾಂಸದೂಟ ಸೇವಿಸಿ 20ಕ್ಕೂ ಹೆಚ್ಚು ಜನರು ಅಸ್ವಸ್ಥ

ರಾಯಚೂರು: ಮಾಂಸದೂಟ ಸೇವಿಸಿ 20ಕ್ಕೂ ಹೆಚ್ಚು ಜನರು ಅಸ್ವಸ್ಥರಾದ ಘಟನೆ ಲಿಂಗಸುಗೂರು ತಾಲೂಕಿನ‌ ಪರಂಪುರ ತಾಂಡಾದಲ್ಲಿ ನಡೆದಿದೆ. ಇಂದು(ಅ.10) ದೇವರ ಕಾರ್ಯಕ್ಕಾಗಿ ತಾಂಡಾ ನಿವಾಸಿಗಳು ಸೇರಿಕೊಂಡು ಮಾಂಸದ ಅಡುಗೆ ಮಾಡಿಸಿದ್ದರು. ಮಧ್ಯಾಹ್ನ ಊಟ ಸೇವಿಸಿದ ಬಳಿಕ ಮಕ್ಕಳು, ಹಿರಿಯರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ಕೂಡಲೇ ಅಸ್ವಸ್ಥರಾದವರನ್ನು ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಸುಮಾರು 250 ಕುಟುಂಬಗಳು ವಾಸಿಸುವ ತಾಂಡ ಇದಾಗಿದ್ದು, ಇಂದು ತಾಂಡದಲ್ಲಿ ದೇವರ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಅದರಂತೆ ಮಾಂಸದ ಅಡುಗೆಯನ್ನು ತಯಾರಿಸಿ ಎಲ್ಲರೂ ಊಟ ಮಾಡಿದ್ದರು. ಎಲ್ಲವೂ ಆಯಿತು ಎನ್ನುವಷ್ಟರಲ್ಲಿ ಕೆಲವರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಾಲೂಕು ಆರೋಗ್ಯಾಧಿಕಾರಿ ಅಮರೇಶ್ ಎಂಬುವವರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular