ರಾಯಚೂರು: ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಹಿರೆ ಕೊಟ್ನೇಕಲ್ ನ ನ್ಯಾಯ ಬೆಲೆ ಅಂಗಡಿಯ ಎಡವಟ್ಟಿಗೆ ಜನ ಕಂಗಾಲಾಗಿದ್ದು, ಅಕ್ಕಿ ಕಡಿಮೆ ಇದ್ದ ಹಿನ್ನೆಲೆ ತಾವೇ ಅಕ್ಕಿ ತುಂಬಿಕೊಂಡು ಹೋಗಿದ್ದಾರೆ.
ಚನ್ನಬಸಪ್ಪ ಅನ್ನೋರು ನಡೆಸುತ್ತಿದ್ದ ನ್ಯಾಯ ಬೆಲೆ ಅಂಗಡಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ನ್ಯಾಯಬೆಲೆ ಅಂಗಡಿಯ ಚನ್ನಬಸಪ್ಪ ಅಕ್ರಮವಾಗಿ ಪಡಿತರ ಅಕ್ಕಿ ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆ ಎರಡು ತಿಂಗಳಿನಿಂದ ಅಕ್ಕಿ ಸರಿಯಾಗಿ ಪೂರೈಕೆಯಾಗುತ್ತಿರಲಿಲ್ಲ ಎನ್ನಲಾಗಿದೆ.
ಮೊನ್ನೆ ಚನ್ನಬಸಪ್ಪ ಕೆಲವರಿಗೆ ಮಾತ್ರ ಪಡಿತರ ಅಕ್ಕಿ ನೀಡಿದ್ದು, ಆಗ ಕ್ಯೂನಲ್ಲಿದ್ದ ನೂರಾರು ಜನರು ಅಕ್ಕಿ ಖಾಲಿಯಾಗುವ ಭಯದಲ್ಲಿ ನೂಕುನುಗ್ಗಲು ಉಂಟಾಗಿದೆ.
ನ್ಯಾಯಬೆಲೆ ಅಂಗಡಿಯಲ್ಲಿ ಎರಡು ಮೂಟೆಯಲ್ಲಿದ್ದ ಪಡಿತರ ಅಕ್ಕಿಯನ್ನು ತಮಗೆ ಸಿಗಬೇಕಾದಷ್ಟು ತುಂಬಿಕೊಂಡು ಹೋಗಿದ್ದಾರೆ.
ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನ್ಯಾಯಬೆಲೆ ಅಂಗಡಿಯ ಚನ್ನಬಸಪ್ಪ ಪಡಿತರ ಅಕ್ಕಿ ಮಾರಾಟ ದಂಧೆ ನಡೆಸುತ್ತಿರುವ ಆರೋಪ ಕೇಳಿಬಂದಿದ್ದು, ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದೆ.