Saturday, April 19, 2025
Google search engine

Homeಅಪರಾಧರಾಯಚೂರು: ಗಿಲ್ಲೆಸೂಗೂರು ಕ್ಯಾಂಪಿನಲ್ಲಿ ವ್ಯಕ್ತಿಯ ಸಂಶಯಾಸ್ಪದ ಸಾವು, ಪ್ರಕರಣ ದಾಖಲು

ರಾಯಚೂರು: ಗಿಲ್ಲೆಸೂಗೂರು ಕ್ಯಾಂಪಿನಲ್ಲಿ ವ್ಯಕ್ತಿಯ ಸಂಶಯಾಸ್ಪದ ಸಾವು, ಪ್ರಕರಣ ದಾಖಲು

ರಾಯಚೂರು:  ತಾಲೂಕಿನ ಗಿಲ್ಲೆಸೂಗೂರು ಕ್ಯಾಂಪಿನಲ್ಲಿ ಮನೆಯಲ್ಲಿ ವ್ಯಕ್ತಿಯೋರ್ವಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ.

ಮೃತ ದುರ್ದೈವಿ ವೀರೇಶ್(೪೩) ಎಂದು ಗುರುತಿಸಲಾಗಿದೆ.

ಭಾನುವಾರ ಮನೆಯಲ್ಲಿ ವೀರೇಶ ಮೃತಪಟ್ಟಿದ್ದು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.

ಆದರೆ ಸಾವಿನ ಸುತ್ತ ಅನುಮಾನ ಹುತ್ತ ಅವರಿಸಿದೆ. ಸದ್ಯ ಮೃತ ಶವನ್ನು ರಾಯಚೂರು ರಿಮ್ಸ್ ಆಸ್ಪತ್ರೆಗೆ ರವಾನಿಸಿ, ಮರಣೋತ್ತರ ಪರೀಕ್ಷೆ ನಡೆಸಿ, ಶವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದ್ದು, ಪಿಎಂ ರಿಪೋರ್ಟ್ ನಂತರ ಸತ್ಯ ಬಯಲಿಗೆ ಬರಲಿದೆ.

ವೀರೇಶ್ ಕುಟುಂಬದಲ್ಲಿ ಜಗಳವಾಡುತ್ತಿದ್ದರೂ ಎನ್ನಲಾಗಿದೆ.

ಪ್ರಕರಣ ಕುರಿತು ಮೃತ ವ್ಯಕ್ತಿ ಚಿಕಪ್ಪ ಗೋವಿಂದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಡಪನೂರು ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕುಟುಂಬಸ್ಥರ ದೂರಿನ ಮೆರೆಗೆ ೧೭೪(ಸಿ) ಅಡಿಯಲ್ಲಿ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

RELATED ARTICLES
- Advertisment -
Google search engine

Most Popular