ಮಂಗಳೂರು (ದಕ್ಷಿಣ ಕನ್ನಡ) : ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಹಲವಾರು ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿ ಮೃತದೇಹಗಳನ್ನು ಹೂತಿರುವುದಾಗಿ ದೂರುದಾರ ತೋರಿಸಿಕೊಟ್ಟಿರುವ ನೇತ್ರಾವತಿ ಸ್ನಾನಘಟ್ಟದ ಸಮೀಪ ನದಿಯ ಬದಿಯಲ್ಲಿ ಅಗೆಯುವ ಕಾರ್ಯ ಎರಡು ಗಂಟೆಗಳ ಬಳಿಕವೂ ಪೂರ್ಣಗೊಂಡಿಲ್ಲ.
ಸ್ಥಳದಲ್ಲಿ ಹಿರಿಯ ಅಧಿಕಾರಿಗಳು ಸಮಾಲೋಚನೆ ನಡೆಸುತ್ತಿದ್ದು, ನದಿ ದಡದಲ್ಲೇ ಅಗೆಯವ ಕಾರ್ಯ ನಡೆಯುತ್ತಿದೆ. ಸ್ಥಳದಲ್ಲಿ ಕಾರ್ಯಾಚರಣೆಗೆ ಯಾವುದೊ ಅಡಚಣೆಯಾಗಿರುವಂತೆ ತೋರುತ್ತಿದೆ.
ಈ ಮಧ್ಯೆ ಮೃತದೇಹ ಅಗೆಯುತ್ತಿರುವ ಸ್ಥಳಕ್ಕೆ ವಿಶೇಷ ತನಿಖಾ ತಂಡದ ಡಿಐಜಿ ಎಂ.ಎನ್. ಅನುಚೇತ್ ಆಗಮಿಸಿದ್ದಾರೆ. ಅವರ ಆಗಮನ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಸಮೀಪ ನದಿಯ ಬದಿಯಲ್ಲಿರುವ ಸ್ಥಳದಲ್ಲಿ ಸಾಕ್ಷಿ ದೂರುದಾರ ಗುರುತಿಸಿದ ಸ್ಥಳದಲ್ಲಿ ಅಗೆಯುವ ಕಾರ್ಯಕ್ಕೆ ಭಾರೀ ಮಳೆ ಸಮಸ್ಯೆ ಉಂಟು ಮಾಡುತ್ತಿದೆ. ಆದರೂ ಕಾರ್ಮಿಕರು ಅಗೆತ ಕಾರ್ಯ ಮುಂದುವರಿಸಿದ್ದಾರೆ. ಘಟನೆಯ ಬಗ್ಗೆ ಕುತೂಹಲದಿಂದ ನೂರಾರು ಸಂಖ್ಯೆಯಲ್ಲಿ ಜನರು ನೇತ್ರಾವತಿ ಸ್ನಾನಘಟ್ಟದ ಸಮೀಪ ಜಮಾಯಿಸಿದ್ದಾರೆ.