ಮದ್ದೂರು: ಮಳೆ ಕೊರತೆ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಯಿಂದ ಸಂಕಷ್ಟದ ಎದುರಾಗಿರುವುದರಿಂದ ಮಳೆಗಾಗಿ ಪ್ರಾರ್ಥಿಸಿ ತಾಲೂಕಿನ ಚಂದಹಳ್ಳಿ ದೊಡ್ಡಿಯಲ್ಲಿ ಗ್ರಾಮಸ್ಥರು ಮಳೆರಾಯನ ಆರಾಧನೆ ಮಾಡಿದರು.
ಮಳೆರಾಯನನ್ನು ಭಕ್ತಿ ಭಾವದಿಂದ ಪೂಜಿಸಿ ಆರಾಧನೆ ಮಾಡಿದ ಗ್ರಾಮದ ಜನತೆ ಮಳೆಗಾಗಿ ಪ್ರಾರ್ಥಿಸಿ ಬರ ಸಂಕಷ್ಟ ದೂರ ಮಾಡು ಎಂದು ಕೋರಿದರು.

ಗ್ರಾಮ ಪಂಚಾಯಿತಿ ಸದಸ್ಯ ಚಿಕ್ಕ ಮರಿಯಪ್ಪ ನೇತೃತ್ವದಲ್ಲಿ ನಡೆದ ಮಳೆರಾಯನ ಆರಾಧನೆಯಲ್ಲಿ ಪುಟಾಣಿ ಮಕ್ಕಳು, ಮಹಿಳೆಯರು ಗ್ರಾಮದ ಜನತೆ ಮಳೆರಾಯನಿಗೆ ಪೂಜೆ ಸಲ್ಲಿಸಿ ಮಳೆ ಸುರಿದುಕೆರೆ -ಕಟ್ಟೆ ತುಂಬಿ ಜಾನುವಾರು, ಪಶು ಪಕ್ಷಿಗಳಿಗೆ ನೀರು ಕರುಣಿಸಿ ಮಳೆರಾಯ ಒಳಿತು ಮಾಡಲಿ ಎಂದು ಪ್ರಾರ್ಥಿಸಿದರು.
ಮಳೆರಾಯನನ್ನು ಆರಾಧಿಸಿದ ಬೆನ್ನಲ್ಲೇ ಗ್ರಾಮದಲ್ಲಿ ಮಳೆ ಸುರಿದದ್ದು ಗ್ರಾಮಸ್ಥರಲ್ಲಿ ಸಂತಸ ತಂದಿತು.