Tuesday, April 28, 2026
Google search engine

Homeಅಪರಾಧಮತ್ತೊಂದು ವಿವಾದದಲ್ಲಿ ರಜತ್: ರಸ್ತೆಯಲ್ಲೇ ಸ್ಫೋಟ ರೀಲ್ಸ್

ಮತ್ತೊಂದು ವಿವಾದದಲ್ಲಿ ರಜತ್: ರಸ್ತೆಯಲ್ಲೇ ಸ್ಫೋಟ ರೀಲ್ಸ್

‘ಬಿಗ್ ಬಾಸ್’ ಖ್ಯಾತಿಯ ರಜತ್ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ. ಈ ಬಾರಿ ಸಾರ್ವಜನಿಕ ರಸ್ತೆಯಲ್ಲೇ ಪೆಟ್ರೋಲ್ ಬಾಂಬ್ ಮಾದರಿಯ ಸ್ಫೋಟ ನಡೆಸಿ ಅದನ್ನು ವೀಡಿಯೊ ರೂಪದಲ್ಲಿ ಚಿತ್ರೀಕರಿಸಿ ಹಂಚಿಕೊಂಡಿರುವುದು ಭಾರೀ ಟೀಕೆಗೆ ಕಾರಣವಾಗಿದೆ. ಈ ಘಟನೆ ಕೇವಲ ಅಜಾಗರೂಕತೆಯಷ್ಟೇ ಅಲ್ಲದೆ ಸಾರ್ವಜನಿಕ ಸುರಕ್ಷತೆಯ ಮೇಲೆಯೇ ಪ್ರಶ್ನೆ ಎಬ್ಬಿಸಿದೆ.

ಈ ಹಿಂದೆ ಕೂಡ ರಜತ್ ವಿವಾದಗಳಿಂದ ದೂರ ಉಳಿಯಲಿಲ್ಲ. ‘ಬಾಯ್ಸ್ ವರ್ಸಸ್ ಗರ್ಲ್ಸ್’ ಶೋ ಚಿತ್ರೀಕರಣದ ವೇಳೆ ಮಚ್ಚು ಹಿಡಿದು ರೀಲ್ಸ್ ಮಾಡಿದ್ದಕ್ಕಾಗಿ ರಜತ್ ಹಾಗೂ ವಿನಯ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಇಬ್ಬರೂ ಪರಪ್ಪನ ಅಗ್ರಹಾರ ಜೈಲುಗೂ ಹೋಗಿ ಬಂದಿದ್ದರು. ನಂತರ ಮೈಸೂರಿನ ಪಾರಂಪರಿಕ ಕಟ್ಟಡದ ಮುಂದೆ ಫೋಟೋಶೂಟ್ ಮಾಡಿ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದರು.

ಇದೀಗ ಹೊಸದಾಗಿ ಹಂಚಿಕೊಂಡಿರುವ ರೀಲ್ಸ್‌ನಲ್ಲಿ ಹಿಂದೆಯೆ ಬೆಂಕಿ ಹೊತ್ತಿಕೊಂಡಿರುವ ದೃಶ್ಯ ಮತ್ತು ಮುಂದೆ ಮಾಡಿಫೈ ಮಾಡಲಾದ ಬುಲೆಟ್ ಬೈಕ್ ಓಡಿಸುತ್ತಿರುವ ದೃಶ್ಯ ಕಾಣುತ್ತದೆ.ಇದಕ್ಕೆ, ಸುಮ್ಮನೆ ತಮಾಷೆಗೆ ಮಾಡಿರೋ ಶೂಟ್. ಇದಕ್ಕೂ ಒಂದು ಕೇಸ್ ಹಾಕ್ಬೇಡ್ರಪ್ಪಾ ರಾಜ’’ ಎಂದು ರಜತ್ ಬರೆದುಕೊಂಡಿದ್ದಾರೆ.

ಜೊತೆಗೆ, ‘’ಈ ಕಂಟೆಂಟ್ ಕ್ರಿಯೇಟ್ ಮಾಡಿರೋದು ಚಿತ್ರೀಕರಣದ ಸಲುವಾಗಿ ಮಾತ್ರ. ಎಲ್ಲಾ ಅವಶ್ಯಕ ಸುರಕ್ಷತಾ ಕ್ರಮಗಳನ್ನ ಕೈಗೊಂಡು, ಪರಿಣತಿ ಹೊಂದಿರುವ ತಜ್ಞರಿಂದ ಮುನ್ನೆಚ್ಚರಿಕಾ ಕ್ರಮಗಳನ್ನ ಪಾಲಿಸಿ ಈ ಚಿತ್ರೀಕರಣ ಮಾಡಿದ್ದೇವೆ. ಇದನ್ನ ಅನುಕರಿಸಬೇಡಿ. ಇದನ್ನ ಮರುಸೃಷ್ಟಿಸಬೇಡಿ. ಬೆಂಕಿ ಅಪಾಯಕಾರಿ. ಚಿತ್ರೀಕರಣದ ವೇಳೆ ಹೆಲ್ಮೆಟ್ ಧರಿಸಿಲ್ಲ. ಇದು ಅಸುರಕ್ಷಿತ. ರಸ್ತೆ ಸುರಕ್ಷತಾ ಕ್ರಮಗಳನ್ನ ಪಾಲಿಸಿ. ವಾಹನ ಚಲಾಯಿಸುವಾಗ ತಪ್ಪದೆ ಹೆಲ್ಮೆಟ್ ಧರಿಸಿ. ಧೂಮಪಾನ ಆರೋಗ್ಯಕ್ಕೆ ಹಾನಿಕರ. ಈ ವಿಡಿಯೋ ಧೂಮಪಾನವನ್ನ ಪ್ರಮೋಟ್ ಮಾಡುವುದಿಲ್ಲ’’ ಎಂಬ ಡಿಸ್‌ಕ್ಲೈಮರ್‌ನ ತಮ್ಮ ರೀಲ್ಸ್‌ ಜೊತೆಗೆ ಹಾಕಿದ್ದಾರೆ.

ಈ ಕೃತ್ಯವು ಕೇವಲ ಕಾನೂನುಬಾಹಿರವಷ್ಟೇ ಅಲ್ಲದೆ ಸಾರ್ವಜನಿಕರ ಜೀವಕ್ಕೂ ಅಪಾಯ ತಂದೊಡ್ಡುವಂತಹದ್ದಾಗಿದೆ. ಈ ಘಟನೆಯ ವೀಡಿಯೊ ಈಗ ಅಂತರ್ಜಾಲದಲ್ಲಿ ಭಾರಿ ಆಕ್ರೋಶಕ್ಕೆ ಅಂದರೆ ಸಾರ್ವಜನಿಕ ಆಕ್ರೋಶ ಕಾರಣವಾಗಿದ್ದು ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. “ಇದು ಕೇವಲ ಮನರಂಜನೆಗಾಗಿ ಮಾಡಿದ ಚಿತ್ರೀಕರಣ” ಎಂದು ರಜತ್ ಸ್ಪಷ್ಟನೆ ನೀಡಿದರೂ, ಸಾರ್ವಜನಿಕರು ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular