ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ತಾಲೂಕಿನ ತಿಪ್ಪೂರು ಗ್ರಾಮಪಂಚಾಯಿತಿಯ ನೂತನ ಅಧ್ಯಕ್ಷರಾಗಿ ರಾಜೇಗೌಡ ಚುನಾಯಿತರಾಗಿ ಶನಿವಾರ ಆಯ್ಕೆಯಾದರು.
ಗ್ರಾಮಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದೆ ಮಾಡಿದ್ದ ರಾಜೇಗೌಡ 12 ಮತಗಳನ್ನು ಪಡೆದು ಆಯ್ಕೆಯಾದರೇ ಇವರ ಪ್ರತಿ ಸ್ಪರ್ಧಿ ಪಿ.ರಾಮಕೃಷ್ಣೇಗೌಡ 6 ಮತಗಳನ್ನು ಪಡೆದು ಪರಾಜಿತರಾದರು.
ಹಾಲಿ ಅಧ್ಯಕ್ಷರಾಗಿದ್ದ ಮಧು ಅವರನ್ನು ಅವಿಶ್ವಾಸದ ಮೂಲಕ ಕೆಳಗಿಳಿಸಿದ ನಂತರ ಈ ಚುನಾವಣೆ ನಿಗದಿಯಾಗಿತ್ತು. ಚುನಾವಣಾಧಿಕಾಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಎನ್.ಶಂಕರಮೂರ್ತಿ ಕಾರ್ಯ ನಿರ್ವಹಿಸಿದರೇ ಪಿಡಿಓ.ಜಿ.ಎಲ್. ಧನಂಜಯ ಸಹಕಾರ ನೀಡಿದರು.
ಚುನಾವಣಾ ಸಭೆಯಲ್ಲಿ ಉಪಾಧ್ಯಕ್ಷೆ ಡಿ.ಕೆ.ಅನಿತಾ, ಸದಸ್ಯರಾದ ನೀಲಯ್ಯ,ಎ.ಪಿ.ದಾಕ್ಷಾಯಿಣಿ, ಅನುಸೂಯ, ಎಚ್.ಆರ್.ಭವ್ಯ,ಶೋಭ, ಟಿ.ಎಸ್.ಸತ್ಯನರಾಯಣ, ಮಧು,ಟಿ.ಸಿ.ಭಾಸ್ಕರನಾಯಕ, ಭಾರತಿ, ಕೆ.ಸಿ.ರಮ್ಯ, ರತ್ನಮ್ಮ , ಶಿವಣ್ಣ, ಡಿ.ಜೆ.ಮಹದೇವ, ಶೋಭ, ಶೈಲಜ , ಕಾರ್ಯದರ್ಶಿ ಮಂಗಳ ಸಾಗರ್, ಬಿಲ್ ಕಲೆಕ್ಟರ್ ಡಿ.ಕೆ.ಮಂಜುನಾಥ್ ಡಿಇಓ ರಾಮು ಸಾಲಿಗ್ರಾಮ ಸೇರಿದ0ತೆ ಮತ್ತಿತರರು ಹಾಜರಿದ್ದರು. ಆನಂತರ ನೂತನ ಅಧ್ಯಕ್ಷ ರಾಜೇಗೌಡ ಅವರನ್ನು ಕೆಆರ್.ನಗರ ತಾಲೂಕು ಭೂ ನ್ಯಾಯಮಂಡಳಿ ಸದಸ್ಯ ದೆಗ್ಗನಹಳ್ಳಿ ಆನಂದ್ ಮತ್ತಿತರರು ಅಭಿನಂಧಿಸಿದರು.