ಚೆನ್ನೈ: ಮಾಜಿ ಪ್ರಧಾನಿ ರಾಜೀವ್ಗಾಂಧಿಯವರ ಹತ್ಯೆ ಪ್ರಕರಣದ ಮೂವರು ಆರೋಪಿಗಳಿಗೆ ತಾತ್ಕಾಲಿಕ ಪ್ರಯಾಣಕ್ಕೆ ಅಗತ್ಯ ದಾಖಲೆಗಳನ್ನು ಶ್ರೀಲಂಕಾದ ಉಪ ಹೈಕಮಿಷನ್ ಸಿದ್ಧಪಡಿಸುತ್ತಿದೆ ಎಂದು ತಮಿಳುನಾಡು ಸರ್ಕಾರ ಚೆನ್ನೈ ಹೈಕೋರ್ಟ್ ಗೆ ಮಾಹಿತಿ ನೀಡಿದೆ.
ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿಗಳಾದ ಶ್ರೀಹರನ್ ಅಲಿಯಾಸ್ ಮುರುಗನ್, ರಾಬರ್ಟ್ ಪಯಾಸ್ ಮತ್ತು ಜಯಕುಮಾರ್ ಅವರನ್ನು ಒಂದು ವಾರದ ಒಳಗಾಗಿ ಶ್ರೀಲಂಕಾಗೆ ಗಡೀಪಾರು ಮಾಡಲಾಗುತ್ತದೆ. ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಗಡೀಪಾರು ಆದೇಶ ಹೊರಡಿಸಿದ ತಕ್ಷಣ ಆರೋಪಿಗಳ ಗಡೀಪಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಸರ್ಕಾರಿ ಅಭಿಯೋಜಕ ಆರ್.ಮುನಿಯಪ್ಪರಾಜ್ ಅವರು, ನ್ಯಾಯಮೂರ್ತಿಗಳಾದ ಆರ್.ಸುರೇಶ್ ಕುಮಾರ್ ಮತ್ತು ಕೆ.ಕುಮಾರೇಶ್ ಬಾಬು ಅವರನ್ನೊಳಗೊಂಡ ನ್ಯಾಯಪೀಠಕ್ಕೆ ತಿಳಿಸಿದರು.