ಹುಣಸೂರು: ನಗರದ ರೋಟರಿ ಭವನದಲ್ಲಿ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಆಚರಣೆ ಮಾಡಲಾಯಿತು.
ರೋಟರಿ ಸಹೋದರರಿಗೆ ರಾಖಿ ಕಟ್ಟಿ ಮಾತನಾಡಿದ, ಹಿರಿಯ ರೊ.ಡಾ.ಸರೋಜಿನಿ ವಿಕ್ರಂ ರಕ್ಷಾ ಬಂಧನ ಅಣ್ಣ ತಂಗಿಯರ ಸಂಬಂಧನನ್ನು ಗಟ್ಟಿಗೊಳಿಸುವ ಈ ಹಬ್ಬ ಹೆಣ್ಣುಮಕ್ಕಳ ರಕ್ಷಣೆಯ ಸಂಕೇತ ವಾಗಿದೆ ಎಂದರು.
ಕಳೆದವಾರ ಸ್ನೇಹಿತರ ದಿನವನ್ನು ಆಚರಿಸಿಕೊಂಡ ನಾವು ಭಾವನೆಗಳ ಬಿತ್ತನೆಗೆ ಈಗ ರಕ್ಷಾ ಬಂಧನ ಆಚರಿಸುವ ಮುಖೇನಾ ಪ್ರೀತಿ, ವಿಶ್ವಾಸ, ನಂಬಿಕೆಗೆ ಹತ್ತಿರವಾಗುವ ಇಂತಹಾ ಭಾವನಾತ್ಮಕ ಆಚರಣೆಗೆ ರೋಟರಿ ಯಾವಾಗಲು ಒತ್ತು ನೀಡುವ ಅವಶ್ಯಕತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್, ಹಿರಿಯ ರೊ.ರಾಜಶೇಖರ್, ಕಾರ್ಯದರ್ಶಿ ಧರ್ಮಾಪುರ ಶ್ಯಾಮಣ್ಣ, ರೊ.ಡಾ.ಬಸವರಾಜ್, ರೊ.ಲೂಯಿಸ್ ಪೆರೇರಾ, ರೊ.ಸಂತೋಷ್ ಕುಮಾರ್, ಹಾಗೂ ಶ್ರೀನಿವಾಸ್ ಇದ್ದರು.